ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗುರುಪೂರ್ಣಿಮೆ ಆಚರಣೆ, ಸಂಗೀತ ಕಾರ್ಯಕ್ರಮ

Last Updated 30 ಜುಲೈ 2021, 12:11 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಗೀತ ಮಹಾವಿದ್ಯಾಲಯದಲ್ಲಿ ಗುರುವಾರ ಗುರುಪೂರ್ಣಿಮೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆಯಿತು.

ಸಂಗೀತ ವಿಭಾಗದ ನಿರ್ದೇಶಕ ಡಾ.ರಾಜೇಂದ್ರ ಭಾ೦ಡನಕರ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಸಂಗೀತ ವಿಭಾಗದ ಸಂಸ್ಥಾಪಕ ದಿವಂಗತ ಪಂಡಿತ್ ಹಯವದನ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು.

ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡಿದರು. ರಾಜೇಂದ್ರ ಭಾಗವತ ತಬಲಾ ಹಾಗೂ ಯಾದವೇಂದ್ರ ಪೂಜಾರಿ ಹಾರ್ಮೋನಿಯಂ ಸಾಥ್ ನೀಡಿದರು. ಸಂಗೀತ ವಿಭಾಗದ ಹಿರಿಯ ತಬಲಾ ಕಲಾವಿದ ಜಿತೇಂದ್ರ ಸಾಬಣ್ಣವರ ಅವರನ್ನು ಸತ್ಕರಿಸಲಾಯಿತು.

ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸ್ನೇಹಾ ರಾಜೂರಿಕರ, ಪ್ರಾಧ್ಯಾಪಕರಾದ ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸೀಮಾ ಕುಲಕರ್ಣಿ ಉಪಸ್ಥಿತರಿದ್ದರು.

ಸ್ವಾತಿ ಹುದ್ದಾರ್ ಹಾಗೂ ಸುಹಾಸಿನಿ ದೇಶಪಾಂಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT