ಸೋಮವಾರ, ಅಕ್ಟೋಬರ್ 19, 2020
24 °C

ಆನ್‌ಲೈನ್‌ನಲ್ಲಿ ನಾಡಹಬ್ಬ ಆಚರಣೆ 19ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇಲ್ಲಿನ ನಾಡಹಬ್ಬ ಉತ್ಸವ ಸಮಿತಿಯಿಂದ 93ನೇ ನಾಡಹಬ್ಬ ಆಚರಣೆಯನ್ನು ಕೋವಿಡ್ ಕಾರಣದಿಂದ ಆನ್‌ಲೈನ್‌ನಲ್ಲಿ (ಗೂಗಲ್ ಮೀಟ್‌) ಅ. 19ರಿಂದ 23ರವರೆಗೆ ನಿತ್ಯ ಸಂಜೆ 4ಕ್ಕೆ ಆಯೋಜಿಸಲಾಗಿದೆ’ ಎಂದು ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪುರ ತಿಳಿಸಿದ್ದಾರೆ.

19ರಂದು ಸಂಜೆ 4ಕ್ಕೆ ನಾಡದೇವಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆ ನೆರವೇರಲಿದೆ. ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸುವರು. ಆರ್‌ಸಿಯು ಸಿಂಡಿಕೇಟ್ ಸದಸ್ಯೆ ನೀತಾರಾವ್‌ ಅಧ್ಯಕ್ಷತೆ ವಹಿಸುವರು. ‘ಮಾದಕ ವಸ್ತುಗಳ ಸೇವನೆ ಮತ್ತು ಯುವ ಜನಾಂಗ’ ವಿಷಯದ ಕುರಿತು ಚಿಂತಕ ರಘುನಂದನ್ ಮಾತನಾಡುವರು.

20ರಂದು ‘ಭಗವದ್ಗೀತೆ ಸಾರ್ವಕಾಲಿಕ’ ವಿಷಯದ ಗೋಷ್ಠಿಯಲ್ಲಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ರಾಜರಾಜೇಶ್ವರಿ ಸಂಸ್ಥಾನದ ವಿಶ್ವಾಧಿರಾಜತೀರ್ಥ  ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರವಚನಕಾರ ಪ್ರಮೋದಾಚಾರ್ಯ ಕಟ್ಟಿ ಉಪನ್ಯಾಸ ನೀಡುವರು. 21ರಂದು ‘ಕಮ್ಯುನಿಷ್ಟ್ ಚೀನಾದ ಕುತಂತ್ರ ಹಾಗೂ ಕೊರೊನಾ’ ಗೋಷ್ಠಿಯಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ರಾಜೇಂದ್ರ ಉಪನ್ಯಾಸ ನೀಡುವರು. ಡಾ.ಎಚ್‌.ಬಿ. ರಾಜಶೇಖರ ಅಧ್ಯಕ್ಷತೆ ವಹಿಸುವರು.

22ರಂದು ‘ರಾಷ್ಟ್ರದ ಬೆಳವಣಿಗೆಗೆ ಭ್ರಷ್ಟಾಚಾರದ ತೊಡಕು’ ಕುರಿತ ಕಾರ್ಯಕ್ರಮ ನಡೆಯಲಿದೆ. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಟಿ. ಪ್ರಸನ್ನ ವಿಷಯ ಮಂಡಿಸುವರು. ವಕೀಲ ಎಂ.ಬಿ. ಝಿರಲಿ ಅಧ್ಯಕ್ಷತೆ ವಹಿಸುವರು. 23ರಂದು ಕವಿಗೋಷ್ಠಿ  ನಡೆಯಲಿದೆ. ಸಾಹಿತಿ ಎಲ್.ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಭುವನೇಶ್ವರಿ ಹಿರೇಮಠ, ನದೀಮ ಸನದಿ, ನಾಗೇಶ ನಾಯಕ, ಜಯಶ್ರೀ ಅಬ್ಬಿಗೇರಿ, ಸುನೀತಾ ದೇಸಾಯಿ, ದೀಪಿಕಾ ಚಾಟೆ, ರಾಜೇಶ್ವರಿ ಹಿರೇಮಠ, ಸಿದ್ದರಾಮ ತಳವಾರ, ಪ್ರೊ.ಜಿ.ಕೆ. ಕುಲಕರ್ಣಿ, ಡಾ.ಹೇಮಾ ಸೊನೊಳ್ಳಿ, ಮಧುಕರ ಗುಂಡೇನಟ್ಟಿ ಭಾಗವಹಿಸುವರು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.