ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಮುನ್ನೋಳಿ: ಸ್ವಾತಂತ್ರ್ಯೋತ್ಸವ

Last Updated 15 ಆಗಸ್ಟ್ 2020, 9:16 IST
ಅಕ್ಷರ ಗಾತ್ರ

ನಾಗರಮುನ್ನೋಳಿ: ಗ್ರಾಮದ ವಿವಿಧೆಡೆ 74ನೇ ಸ್ವಾತಂತ್ರ್ಯೋತ್ಸವನ್ನು ಶನಿವಾರ ಸರಳವಾಗಿ ಆಚರಿಸಲಾಯಿತು.

ಗ್ರಾಮ ಪಂಚಾಯಿತಿಯಿಂದ ಕಾರ್ಯದರ್ಶಿ ಡಿ.ಎನ್. ಬಸನಾಯ್ಕ ಗಾಂಧೀಜಿ ಫೋಟೊ ಪೂಜೆ ಸಲ್ಲಿಸಿದರು. ‍ಪಿಡಿಒ ಶಿವಾನಂದ ಹಡಪದ ಧ್ವಜಾರೋಹಣ ನೆರವೇರಿಸಿದರು. ಟಿ.ಎಸ್. ಪೂಜೇರಿ, ಸತ್ಯಪ್ಪ ಬಗರನಾಳ, ನಿಂಗಪ್ಪ ಭಂಗಿ, ದಸ್ತಗೀರ ಫೆಂಡಾರಿ, ಬಸವರಾಜ ಚೌಗಲಾ ಇದ್ದರು.

ನಾಡ ಕಚೇರಿಯಲ್ಲಿ ಕಂದಾಯ ನಿರೀಕ್ಷಕ ಡಿ.ಎಸ್. ಒಟಗೋಡಿ ಪೂಜಿಸಿದರೆ, ಉಪತಹಶೀಲ್ದಾರ್‌ ವಿಜಯ ಚೌಗಲಾ ಧ್ವಜಾರೋಹಣ ಮಾಡಿದರು. ಶಿವಾನಂದ ಕೆಚಡಿ, ರಘು ಬಡಿಗೇರ, ಭೀಮಪ್ಪ ಚೌಗಲಾ, ವಿಠ್ಠಲ ಇಟ್ನಾಳೆ, ಕೆಂಪಣ್ಣ ಐಹೊಳೆ, ಸುರೇಶ ಪೂಜೇರಿ ಭಾಗವಹಿಸಿದ್ದರು.

ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಪಾಧ್ಯಕ್ಷ ಪ್ರಕಾಶ ಮನಗೂಳಿ ಫೋಟೊಗೆ ಪೂಜೆ ಸಲ್ಲಿಸಿದರೆ, ಅಧ್ಯಕ್ಷ ಶಂಕರ ನೇರ್ಲಿ ಧ್ವಜಾರೋಹಣ ಮಾಡಿದರು. ಆರ್.ಬಿ. ಪಾಟೀಲ, ಡಿ.ಬಿ. ಕೊಟಬಾಗಿ, ಕೆಂಪ್ಪಣ್ಣ ಈಟಿ, ಭೀಮಪ್ಪ ಬಾನಿ, ಪ್ರಕಾಶ ಚೌಗಲಾ, ಕೆಂಪಣ್ಣ ಯಾದಗೂಡೆ, ಬಸವರಾಜ ಕೀಲೆದಾರ ಪಾಲ್ಗೊಂಡಿದ್ದರು.

ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮುಖಂಡರಾದ ಬಿ.ಎಸ್. ಯಾದಗೂಡೆ, ಮಲಗೌಡ ನೆರವೇರಿಸಿದರು. ಡಾ.ಎಂ.ಡಿ. ಮಾನೆ, ಮಾರುತಿ ಹುಲ್ಲೋಳಿ, ಗುರುಪಾದ ಪೂಜೇರಿ, ವೀರಭದ್ರ ಕಲ್ಯಾಣಿ, ಅಶೋಕ ಮನಗೂಳಿ, ಎಂ.ಬಿ. ಮರ‍್ಯಾಯಿ, ಎಂ.ಎಸ್. ಅರಬಾವಿ, ವಿದ್ಯಾ ಕುಂಬಾರ, ಸುನೀತಾ ಕುಂಬಾರ, ಮಲ್ಲವ್ವ ಪಾಟೀಲ ಇದ್ದರು. ಶಿವಯೋಗೀಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸದಸ್ಯ ಲಕ್ಷ್ಮಣ ಚೌಗಲ ಹಾಗೂ ಅಧ್ಯಕ್ಷ ಎಂ.ಎಸ್. ಈಟಿ ನೆರವೇರಿಸಿದರು. ಎಸ್.ಪಿ. ಮನಗೂಳಿ, ಬಿ.ಎಸ್. ಕರೋಶಿ, ಎಸ್.ಬಿ. ನೇರ್ಲಿ, ಆರ್.ಎಂ. ಕೊಟಬಾಗಿ ಇದ್ದರು.

ರಾಜೀವ ಸಹಕಾರಿ ಕ್ರೆಡಿಟ್ ಸೊಸೈಟಿಯಲ್ಲಿ ಉಪಾಧ್ಯಕ್ಷ ಭೀರಪ್ಪ ನಾಗರಾಳೆ ಹಾಗೂ ಅಧ್ಯಕ್ಷ ಎಸ್.ಬಿ. ಮನಗೂಳಿ ನೆರವೇರಿಸಿದರು. ಎಸ್.ಎಸ್. ಮರ‍್ಯಾಯಿ, ಮಕಬುಲ್ ಜಮಾದರ, ಕಾಶಪ್ಪ ಗಿಜನ್ನವರ, ರಾಜು ಚವಾಣ ಇದ್ದರು.

ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ, ಉರ್ದು ಶಾಲೆ, ಸಿದ್ದಿವಿನಾಯಕ ಸಹಕಾರಿ ಸೊಸೈಟಿ, ಬಸವೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ, ನಮ್ಮೂರ ಗ್ರಾಮೀಣ ಸಂಸ್ಥೆ, ಸಿದ್ದೇಶ್ವರ ಪಿ.ಕೆ.ಪಿ.ಎಸ್., ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳಿಂದಲೂ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT