ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಮುನ್ನೋಳಿ: ಮೋದಿ ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ

Last Updated 28 ಸೆಪ್ಟೆಂಬರ್ 2022, 5:30 IST
ಅಕ್ಷರ ಗಾತ್ರ

ನಾಗರಮುನ್ನೋಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಆರೋಗ್ಯದ ಕಡೆ ಒತ್ತು ನೀಡಿದ್ದಾರೆ. ಈ ಮೂಲಕ ಗ್ರಾಮೀಣ ಜನರ ಬದುಕಿಗೆ ಬೆಳಕು ತಂದಿದ್ದಾರೆ’ ಎಂದು ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಹೇಳಿದರು.

ಸಮೀಪದ ಜಾಗನೂರ ಗ್ರಾಮದ ಹನುಮಾನ್‌ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಬಾಗ ಮಂಡಲ ಸಭೆ ಹಾಗೂ ಒಬಿಸಿ ಯುವ ಮೋರ್ಚಾದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪ್ಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಯಾದ ಆಯುಷ್ಮಾನ್‌ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ₹5ಲಕ್ಷದವರೆಗೆ ಉಚಿತ ವೈದ್ಯಕೀಯ ಉಪಚಾರ ಲಭಿಸುತ್ತದೆ. ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಶೇ 30ರಷ್ಟು ರಿಯಾಯಿತಿ ಸಿಗುತ್ತದೆ. ಎಲ್ಲ ವರ್ಗದ ಜನರು ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೊಣವಾಡೆ ಮಾತನಾಡಿ, ಕೊರೊನಾ ವೇಳೆಯಲ್ಲಿ ದೇಶದಲ್ಲಿ ಆರೋಗ್ಯದ ಮೇಲೆ ಸತತವಾಗಿ ನಿಗಾ ಇಟ್ಟು ಪ್ರಧಾನಿಯವರು ಸ್ವದೇಶಿ ಲಸಿಕೆ ತಯಾರಿಸಲು ಪ್ರೇರೇಪಣೆ ನೀಡಿದರು. ಉಚಿತವಾಗಿ ವಿತರಿಸುವ ಮೂಲಕ ದೇಶದ ಪ್ರತಿಯೊಬ್ಬರ ಆರೋಗ್ಯದ ಕಾಳಜಿ ವಹಿಸಿದರು’ ಎಂದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ ಮಾತನಾಡಿದರು. ಜಿಲ್ಲಾ ಪ್ರಭಾರಿ ರಾಜು ಕುರಡಗಿ, ಒಬಿಸಿ ಮೊರ್ಚಾ ಮಂಡಲ ಅಧ್ಯಕ್ಷ ಬಸವರಾಜ ಮಾಳಗಿ, ರಮಜಾನ್‌ ಮಕಾನದಾರ, ಬಸವರಾಜ ಬೇಕೆರಿ, ಲಕ್ಷ್ಮಣ ಹನುಮನ್ನವರ, ಶಿವರಾಯಿ ಸನದಿ, ಮಲ್ಲೇಶ ಹನಮಂತಗೋಳ, ಭೀರಪ್ಪ ಬೆಕ್ಕೇರಿ, ಪರಸಪ್ಪ ಕರಿಕಟ್ಟಿ, ಮಾರುತಿ ಪೇಡ್ಡಾರೆ, ಸಿದ್ದು ಖಿಂಡಿ, ಸತ್ಯಪ್ಪ ಬಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT