ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ’

ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬೂರಾವ್‌ ಚಿಂಚನಸೂರ ಹೇಳಿಕೆ
Last Updated 28 ಏಪ್ರಿಲ್ 2018, 14:00 IST
ಅಕ್ಷರ ಗಾತ್ರ

ಯಾದಗಿರಿ: ‘ಅಧಿಕಾರಾವಧಿಯಲ್ಲಿ ಮತಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ತಲುಪಿಸುವ, ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಿದ್ದೇನೆ’ ಎಂದು ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಹೇಳಿದರು.

ಸಮೀಪದ ಕಟಗಿ ಶಹಾಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆ ಯೋಜನೆಗಳ ಲಾಭ ಪ್ರತಿಯೊಂದು ಕುಟುಂಬಕ್ಕೆ ತಲುಪಿದೆ’ ಎಂದು ತಿಳಿಸಿದರು.

ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ ಹತ್ತಿಕುಣಿ ಮಾತನಾಡಿ,‘ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಚಿಂಚನಸೂರ ಅವರ ಇಚ್ಛಾಶಕ್ತಿಯಿಂದ ₹440 ಕೋಟಿ ವೆಚ್ಚದಲ್ಲಿ ಮತಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾಗಿದೆ. ಬರುವ ದಿನಗಳಲ್ಲಿ ರೈತಾಪಿ ವರ್ಗದ ಸಮಸ್ಯೆಗಳು ಪರಿಹಾರವಾಗಲಿವೆ’ ಎಂದರು.

‘ಕಾಂಗ್ರೆಸ್‌ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಬಹುತೇಕ ಈಡೇರಿಸಿದೆ. ಮತದಾರರು ಈ ಬಾರಿ ಬಾಬುರಾವ ಚಿಂಚನಸೂರ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ಬಲಪಡಿಸಬೇಕು’ ಎಂದು ಕೋರಿದರು.

ಮುಖಂಡ ಶಂಭುರಡ್ಡಿ ಪಾಟೀಲ ಹಾಗೂ ಬೆಂಬಲಿಗರನ್ನು ಕಾಂಗ್ರೆಸ್‌ ಸೇರ್ಪಡೆಯಾದರು. ಶಿವಲಿಂಗಪ್ಪ ಪುಟಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಠೋಡ, ಎಪಿಎಂಸಿ ಅಧ್ಯಕ್ಷ ಚಂದ್ರಾರಡ್ಡಿ ಬಂದಳ್ಳಿ, ವೀರಭದ್ರಪ್ಪ ಯಡ್ಡಳ್ಳಿ, ಶರಣಗೌಡ ಕಟಗಿ ಶಹಾಪೂರ, ನಿಂಗಪ್ಪ ಹೊನಗೇರಾ, ಭೀಮರಡ್ಡಿ ರಾಂಪೂರಹಳ್ಳಿ, ನಿರಂಜನ ಯರಗೋಳ, ಪರಶುರಾಮ ಚವ್ಹಾಣ, ಹೊನ್ನಪ್ಪ ನಾಟೇಕಾರ್, ಮಹಿಪಾಲರಡ್ಡಿ ಪಾಟೀಲ ಕೆ, ಸಾಬಣ್ಣ ನಾಟೇಕಾರ್, ಮಕ್ಬೂಲ್ ಪಟೇಲ್ ಹೊಸಳ್ಳಿ, ಸಾಬಣ್ಣ ಇದ್ದರು.

‘ಸುಳ್ಳು ಭರವಸೆಗೆ ಕಿವಿಗೊಡದಿರಿ’

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೀಡಿದ್ದ ಎಲ್ಲ ಭರವಸೆ ಈಡೇರಿಸಿದ್ದು, ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯ ಪಟ್ಟರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ಜನಹಿತ ಕಾಪಾಡುವ ಕಾಂಗ್ರೆಸ್‌ ಅಧಿಕಾರಾವಧಿ ಬಗ್ಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹವರ ಮಾತಿಗೆ ಕಿವಿಗೊಡಬಾರದು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಮತಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.

ಬಿಎಸ್‌ಪಿಯ ಸಂಚಾಲಕ ತಜಮಲ್ ಹುಸೇನ್, ವಿಶ್ವನಾಥ ದೇಸಾಯಿ, ಚಂದ್ರಶೇಖರ, ಅಬೂಬ ಅಲೀ, ಖಾಸೀಂ ದಾದು, ಬಸ್ಸು ಸಿ, ಫ್ರಭು ಕೋಡಾಲ, ದೇವರಾವ್, ಮಹ್ಮದ್ ಸಿರಾಜುದ್ದೀನ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ ಮತ್ತಿತರು ಇದ್ದರು.

**
ಕಾಂಗ್ರೆಸ್‌ ಬಡ ಜನರ ಸ್ಥಿತಿಗತಿ ಅಧ್ಯಯನ ಮಾಡಿಯೇ ಪ್ರಣಾಳಿಕೆ ರೂಪಿಸಿದೆ. ಅವುಗಳನ್ನು ತಪ್ಪದೆ ಅನುಷ್ಠಾನಗೊಳಿಸಲಿದೆ
– ಡಾ.ಎ.ಬಿ.ಮಾಲಕರೆಡ್ಡಿ, ಯಾದಗಿರಿ ಮತಕ್ಷೇತ್ರದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT