ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ಏರ್ಮನ್ ತರಬೇತಿ ಶಾಲೆ: ನೂತನ ಕಮಾಂಡಿಂಗ್ ಏರ್ ಆಫೀಸರ್ ನಿಯೋಜನೆ

Last Updated 10 ಜೂನ್ 2022, 5:17 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಏರ್ಮನ್ ತರಬೇತಿ ಶಾಲೆಯ ನೂತನ ಕಮಾಂಡಿಂಗ್ ಏರ್ ಆಫೀಸರ್ ಆಗಿ ಏರ್ ಕಮಾಂಡರ್ ಎಸ್.ಶ್ರೀಧರ್ ಗುರುವಾರ ಅಧಿಕಾರ ವಹಿಸಿಕೊಂಡರು.

ಪ್ರಸಕ್ತ ವರ್ಷದ 'ನಿಕೋಬಾರ್ ಕಮಾಂಡ್' ಪದಕ ಪಡೆದ ಅವರು ಇದಕ್ಕೂ ಮುನ್ನ, ಭಾರತೀಯ ವಾಯುಪಡೆಯ ಕಾಂಪೊನೆಂಟ್ ಕಮಾಂಡರ್ ಹಾಗೂ ಎಎನ್‌ಸಿ ಹುದ್ದೆಯಲ್ಲಿದ್ದರು.

1993 ಮತ್ತು 2005ರಲ್ಲಿ ಏರ್ ಆಫೀಸರ್ ಕಮಾಂಡಿಂಗ್- ಇನ್ ಚೀಫ್, 2005ರಲ್ಲಿ ಏರ್ ಸ್ಟಾಫ್ ಚೀಫ್, ಕಮಾಂಡರ್ ಇನ್ ಚೀಫ್ ಹುದ್ದೆಯಲ್ಲಿದ್ದಾಗ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2011ರಲ್ಲಿ ವಾಯುಸೇನಾ ಪದಕವನ್ನು ಪಡೆದುಕೊಂಡಿದ್ದಾರೆ.

1989ರ ಜೂನ್ 14ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸ್ಟ್ರೀಮ್‌ನಲ್ಲಿ ಅವರು ತಮ್ಮ ಸೇವೆ ಆರಂಭಿಸಿದರು.

33 ವರ್ಷಗಳ ತಮ್ಮ ವೃತ್ತಿ ವೃತ್ತಿಜೀವನದಲ್ಲಿ ಸುಮಾರು 5000 ಗಂಟೆಗಳ ಕಾಲ ಅವರು ಹಾರಾಟ ನಡೆಸಿದ್ದಾರೆ.

ಐಎಎಫ್‌ನ ವಿವಿಧ ವಿಮಾನಗಳು, ಹೆಲಿಕಾಪ್ಟರ್ ಘಟಕದ ಕಮಾಂಡರ್, ಜಮ್ಮು - ಕಾಶ್ಮೀರದಲ್ಲಿ ವಿವಿಧ ಕಾರ್ಯಾಚರಣಾ ಬೇಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ, ಅಂಡಮಾನ್- ನಿಕೋಬಾರ್ ಕಮಾಂಡ್‌ನ ಚೀಫ್ ಆಪರೇಷನ್ ಆಫೀಸರ್ (ಏರ್) ಮತ್ತು ಪೂರ್ವ ವಾಯುಪಡೆಯ ಅಡಿಯಲ್ಲಿ ಏರ್ ಫೋರ್ಸ್ ಸ್ಟೇಷನ್‌ನ ಸ್ಟೇಷನ್ ಕಮಾಂಡರ್‌ ನಂತಹ ಉನ್ನತ ಹುದ್ದೆಗಳನ್ನೂ ನಿಭಾಯಿಸಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT