ಹೊಸ ಟ್ರೆಂಡ್‌... ಬ್ಯಾಂಬೂ ಬಿರಿಯಾನಿ

7

ಹೊಸ ಟ್ರೆಂಡ್‌... ಬ್ಯಾಂಬೂ ಬಿರಿಯಾನಿ

Published:
Updated:
Deccan Herald

ಬೆಳಗಾವಿ: ಹಲವು ರೀತಿಯಲ್ಲಿ ಬಿರಿಯಾನಿ ಮಾಡಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಬ್ಯಾಂಬೂ ಬಿರಿಯಾನಿ (ಬಿದಿರಿನ ಕೊಳವೆಯಲ್ಲಿ) ಆರಂಭವಾಗಿದೆ. ನಗರದ ಕಾಂಗ್ರೆಸ್‌ ರಸ್ತೆಯಲ್ಲಿರುವ ಅರ್ಜುನ್‌ ಎಂಪೈರ್‌ ಕಟ್ಟಡದ ಮೇಲ್ಛಾವಣಿಯಲ್ಲಿರುವ ಹೈ ಸ್ಟ್ರೀಟ್‌ ಹೋಟೆಲ್‌ನಲ್ಲಿ ಬ್ಯಾಂಬೂ ಬಿರಿಯಾನಿ ಉಣಬಡಿಸಲಾಗುತ್ತಿದೆ.

ಎಂಬಿಎ ಪದವೀಧರ ಹಾಗೂ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಶಿಕ್ಷಣ ಪಡೆದಿರುವ ಆದಿತ್ಯ ಬಂಡಿವಾಡೆಕರ್‌, ಕಳೆದ ವರ್ಷ ಮಾರ್ಚ್‌ನಿಂದ ಈ ಹೋಟೆಲ್‌ ಆರಂಭಿಸಿದ್ದಾರೆ. ಕೇರಳಕ್ಕೆ ಪ್ರವಾಸ ಹೋದಾಗ ಬ್ಯಾಂಬೂ ಬಿರಿಯಾನಿ ತಿಂದಿದ್ದರು. ಅದರ ರುಚಿ ಇಷ್ಟವಾಗಿತ್ತು. ಅಂತಹದ್ದನ್ನೇ ಬೆಳಗಾವಿಯಲ್ಲೂ ಏಕೆ ಆರಂಭಿಸಬಾರದೆಂದು ಯೋಚಿಸಿದರು. ಬಾಣಸಿಗರಿಗೆ ತರಬೇತಿ ನೀಡಿ, ಹೋಟೆಲ್‌ ಆರಂಭಿಸಿ ಬಿಟ್ಟರು.

ವಿಭಿನ್ನ ರುಚಿಯ ಬಿರಿಯಾನಿ ಸವಿಯಲು ಬಯಸುವವರೆಗೆ ಅತ್ಯುತ್ತಮ ತಾಣವಾಗಿ ಹೈ ಸ್ಟ್ರೀಟ್‌ ಏರ್ಪಟ್ಟಿದೆ. ವಿಶೇಷವಾಗಿ ಯುವಕರು ಹೆಚ್ಚಾಗಿ ಆಕರ್ಷಿತರಾಗಿದ್ದಾರೆ. ಬಿರಿಯಾನಿ ಜೊತೆ ವಾದ್ಯಗೋಷ್ಠಿಯ ವ್ಯವಸ್ಥೆ ಕೂಡ ಕಲ್ಪಿಸಿದ್ದಾರೆ.

ವಿಶೇಷತೆ

ಬುಡಕಟ್ಟು ಜನರು ಬಿದಿರಿನ ಕೊಳವೆಯಲ್ಲಿ ಆಹಾರವನ್ನು ಬೇಯಿಸುತ್ತಾರೆ. ಬಿದಿರಿನಲ್ಲಿರುವ ಎಣ್ಣೆ ಹಾಗೂ ನೀರಿನ ಅಂಶವು ಆಹಾರದ ಜೊತೆ ಬೆರೆತು ವಿಶಿಷ್ಟ ರುಚಿ ನೀಡುತ್ತದೆ. ಇದೇ ತಂತ್ರವನ್ನು ಕೇರಳದಲ್ಲಿ ಬಳಸಿ, ಬಿರಿಯಾನಿ ಮಾಡಲಾಗುತ್ತದೆ.

‘ಹೈ ಸ್ಟ್ರೀಟ್‌ ಹೋಟೆಲ್‌ನಲ್ಲಿಯೂ ಇದೇ ವಿಧಾನವನ್ನು ಅನುಸರಿಸಿ, ಬಿರಿಯಾನಿ ತಯಾರಿಸುತ್ತೇವೆ. ಚಿಕನ್‌ ಬಿರಿಯಾನಿ ಜೊತೆಗೆ ಮೊಟ್ಟೆ ಬಿರಿಯಾನಿ ಹಾಗೂ ವೆಜ್‌ ಬಿರಿಯಾನಿ ಕೂಡ ತಯಾರಿಸುತ್ತೇವೆ. ಅಸಲಿ ಮಸಾಲೆ ಪದಾರ್ಥಗಳನ್ನೇ ಬಳಸುತ್ತೇವೆ. ಯಾವುದೇ ರೀತಿಯ ಎಸೆನ್ಸ್‌ (ರಾಸಾಯನಿಕ) ಬಳಸುವುದಿಲ್ಲ. ಹೀಗಾಗಿ ಆಹಾರ ರುಚಿಕಟ್ಟಾಗಿರುತ್ತದೆ’ ಎನ್ನುತ್ತಾರೆ ಆದಿತ್ಯ.

ಒಂದು ಪ್ಲೇಟ್‌ ಚಿಕನ್‌ ಬ್ಯಾಂಬೂ ಬಿರಿಯಾನಿಗೆ ₹ 160, ಮೊಟ್ಟೆ ಬಿರಿಯಾನಿಗೆ ₹ 140, ವೆಜ್‌ ಬಿರಿಯಾನಿಗೆ ₹ 130.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !