ನಿಚ್ಚಣಕಿ (ಚನ್ನಮ್ಮನ ಕಿತ್ತೂರು ತಾ): ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಚ್ಚಣಕಿ ಗ್ರಾಮದಲ್ಲಿ 6 ಕುಟುಂಬಗಳು ಸಗಣಿಯಿಂದ ತಯಾರಾಗುವ ಗ್ಯಾಸ್ ಬಳಸಿ ಜೀವನ ನಿರ್ವಹಣೆ ಮಾಡುತ್ತಿವೆ. ಅದರಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಡಿವಾಳಪ್ಪ ಬಸವಣ್ಣೆಪ್ಪ ವರಗಣ್ಣವರ ಅವರ ಕುಟುಂಬದವರು 30 ವರ್ಷಗಳಿಂದ ಇದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ಇವರ ಕುಟುಂಬದಲ್ಲಿ ಪತಿ, ಪತ್ನಿ, ಮಕ್ಕಳು, ಪಾಲಕರು ಸೇರಿ ಎಂಟು ಮಂದಿ ಇದ್ದಾರೆ. ಎಂಟೂ ಮಂದಿಗೆ ಸಾಕಾಗುವಷ್ಟು ಉಪಾಹಾರ, ಊಟ ಹಾಗೂ ಬಿಸಿನೀರು ಒದಗಿಸುವಷ್ಟು ಗೋಬರ್ ಗ್ಯಾಸ್ ಸಮರ್ಥವಾಗಿದೆ. ಇದನ್ನು ಆರಂಭಿಸಿದ್ದು ಮಡಿವಾಳಪ್ಪ ಅವರ ತಂದೆ ಬಸವಣ್ಣೆಪ್ಪ. ಕುಟುಂಬ ಚಿಕ್ಕದಿದ್ದಾಗ ಬೆಳಿಗ್ಗೆ ಹಾಗೂ ಸಂಜೆ ಇದರ ಬಳಕೆ ಸಾಧ್ಯವಾಗುತ್ತಿತ್ತು. ಈಗ ಜನ ಹೆಚ್ಚಾಗಿದ್ದರಿಂದ ಬೆಳಿಗ್ಗೆ ಹೊತ್ತು ಮಾತ್ರ ಸಾಲುತ್ತಿದೆ.

‘ನಮ್ಮ ಮನೆಯಲ್ಲಿ ನಾಲ್ಕು ದನಗಳಿವೆ. ಅವುಗಳ ಸಗಣಿಗೆ ನೀರು ಕಲಿಸಿ ಗ್ಯಾಸ್ಪಾಯಿಂಟ್ಗೆ ಸುರಿದರೆ ಸಾಕು. ಬಿಡಿಗಾಸೂ ಖರ್ಚು ಇಲ್ಲದೇ ಅಡುಗೆ ಅನಿಲ ಸಿಗುತ್ತದೆ. ಕಳೆದೊಂದು ವರ್ಷದಿಂದ ನಿರ್ವಹಣೆ ಸರಿಯಾಗಿ ಮಾಡದ ಕಾರಣ ಉರಿಯುವ ಅವಧಿ ಕಡಿಮೆಯಾಗಿದೆ. ಸದ್ಯ ಅನಿಲ ಕೊರತೆ ಕಂಡುಬಂದ ಕಾರಣ ಮತ್ತೆ ಅದನ್ನು ದುರಸ್ತಿಗೊಳಿಸಿ ಪರಿಪೂರ್ಣವಾಗಿ ಉಪಯೋಗಿಸಲು ಸಿದ್ಧತೆ ನಡೆಸಿದ್ದೇವೆ’ ಎನ್ನುವುದು ಮಡಿವಾಳಪ್ಪ– ನೀಲವ್ವ ದಂಪತಿಯ ಮಾತು.

ಇವರ ಸಹೋದರ ಸಂಬಂಧಿಗಳಾದ ಶಂಕರ ಬಸವಣ್ಣೆಪ್ಪ ವರಗಣ್ಣವರ, ಮಹಾಂತೇಶ ಬಸವರಾಜ ವರಗಣ್ಣವರ, ನಾಗಪ್ಪ ಬಸವಂತಪ್ಪ ವರಗಣ್ಣವರ, ಈರಬಸಪ್ಪ ಬಸವಣ್ಣೆಪ್ಪ ವರಗಣ್ಣವರ, ಈರಣ್ಣ ನಾಗಪ್ಪ ವರಗಣ್ಣವರ ಹಾಗೂ ಬಸವಣ್ಣೆಪ್ಪ ಮಲ್ಲೇಶಪ್ಪ ವಕ್ಕುಂದ ಅವರ ಮನೆಗಳಲ್ಲೂ ಇದೇ ಮಾದರಿಯ ಸಗಣಿ ಗ್ಯಾಸ್ ಬಳಸುತ್ತಿರುವುದು ವಿಶೇಷ.

‘ಸಾಂಪ್ರದಾಯಿಕ ಇಂಧನವೇ ಶ್ರೇಷ್ಠ’

‘ಇರಾನ್, ಅಮೆರಿಕ– ಇಸ್ರೇಲ್ ಯುದ್ಧದ ಪರಿಣಾಮ ಇಂದು ಜಗತ್ತಿನ ಎಲ್ಲ ಕಡೆ ಬೀರುತ್ತಿದೆ. ಆ ದೇಶಗಳು ಸರಬರಾಜು ಮಾಡುವ ತೈಲವನ್ನು ನಾವು ನಂಬಿಕೊಂಡಿದ್ದೇ ಇಂದಿನ ಸ್ಥಿತಿಗೆ ಕಾರಣ. ಭಾರತೀಯರು ಕಂಡುಕೊಂಡ ಜೈವಿಕ ಇಂಧನವು ಜಗತ್ತಿನ ಎಲ್ಲ ಇಂಧನಗಳಿಗಿಂತಲೂ ಶ್ರೇಷ್ಠ’ ಎಂಬುದು ವರಗಣ್ಣವರ ಕುಟುಂಬದವರ ಅನುಭವ.

‘ಈಗ ಅನಿವಾರ್ಯವಾಗಿ ನಾವೂ ಒಮ್ಮೊಮ್ಮೆ ಹಣ ಕೊಟ್ಟು ಸಿಲಿಂಡರ್ ಖರೀದಿಸುತ್ತೇವೆ. ಆದರೆ, 10 ಪೈಸೆ ಖರ್ಚೂ ಇಲ್ಲದೇ ಜೈವಿಕ ಅನಿಲ ಉತ್ಪಾದನೆ ಮಾಡಬಹುದು. ಇದರು ಪರಿಸರಕ್ಕೂ ಉತ್ತಮ, ಆರೋಗ್ಯಕ್ಕೂ ಒಳ್ಳೆಯದು. ಸಾವಿರಾರು ಕೋಟಿ ಖರ್ಚು ಮಾಡಿ ಇಂಧನ ಆಮದು ಮಾಡಿಕೊಳ್ಳುವ ಬದಲು; ಸರ್ಕಾರ ಜೈವಿನಕ ಘಟಕಗಳಿಗೆ ಉತ್ತೇಜನ ನೀಡಬಹುದು’ ಎಂಬುದು ಅವರ ಸಲಹೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-21-1878908202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.