ಚೆಸ್: ನಿರಂಜನಗೆ 3ನೇ ಬಹುಮಾನ

ಶುಕ್ರವಾರ, ಮೇ 24, 2019
33 °C

ಚೆಸ್: ನಿರಂಜನಗೆ 3ನೇ ಬಹುಮಾನ

Published:
Updated:
Prajavani

ಬೆಳಗಾವಿ: ಇಲ್ಲಿನ ಚೆಸ್ ಆಟಗಾರ, ಫಿಡೇ ಮಾಸ್ಟರ್ ನಿರಂಜನ ನವಲಗುಂದ ಬೆಂಗಳೂರಿನ ಸಿಲಿಕಾನ್ ಸಿಟಿ ಶಾಲೆಯಲ್ಲಿ ಈಚೆಗೆ ನಡೆದ 3ನೇ ಬೆಂಗಳೂರು ಮುಕ್ತ ಅಂತರರಾಷ್ಟ್ರೀಯ ಶ್ರೇಯಾಂಕಿತ ಚದುರಂಗ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದಿದ್ದಾರೆ.

ರಾಜ್ಯದ ಪರವಾಗಿ ಭಾಗವಹಿಸಿದ್ದ ಅವರು 10 ಸುತ್ತಿನ ಸ್ಪರ್ಧೆಯಲ್ಲಿ ಉತ್ತಮ ಆಟ ಪ್ರದರ್ಶಿಸಿ 8.5 ಅಂಕ ಗಳಿಸಿದ್ದರು. 2ನೇ ಸ್ಥಾನ ಪಡೆದ ಸ್ಪರ್ಧಿಯೊಂದಿಗೆ ಸಮ ಅಂಕಗಳನ್ನು ಪಡೆದಿದ್ದರು. ಟೈ ಬ್ರೇಕ್ ನಿಯಮದ ಅನ್ವಯ 3ನೇ ಬಹುಮಾನ ಗಳಿಸಿದರು. ಗಿರೀಶ ಕೌಶಿಕ್ 9.5 ಅಂಕಗಳನ್ನು ಗಳಿಸಿ ಪ್ರಥಮ, ಚಕ್ರವರ್ತಿ ರೆಡ್ಡಿ 8.5 ಅಂಕಗಳನ್ನು ಗಳಿಸಿ 2ನೇ ಸ್ಥಾನ ಪಡೆದರು.

ವಿವಿಧ ರಾಜ್ಯಗಳ 390 ಆಟಗಾರರು ಭಾಗವಹಿಸಿದ್ದರು. ಬೆಂಗಳೂರಿನ ಆಟಗಾರರ ಪಾಲಕರು ಹಾಗೂ ಆಸಕ್ತರು ಸೇರಿ ಈ ಸ್ಪರ್ಧೆ ಆಯೋಜಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !