ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾವಿಷಯಕ ಪರಿಷತ್‌ಗೆ ನಾಮನಿರ್ದೇಶನ

Last Updated 3 ಮಾರ್ಚ್ 2021, 6:47 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.

ಹನುಮಾನ ನಗರದ ಡಾ.ಶಿವಜಾತ ಬಸವಲಿಂಗಪ್ಪ ಸೋಮಣ್ಣವರ, ಪಾಟೀಲ ಗಲ್ಲಿಯ ಅಂಕಿತಾ ಧನ್ಯಕುಮಾರ್, ಸುಭಾಷ್ ನಗರದ ಸಚಿನ್ ಅಣಜಿ (ಕೈಗಾರಿಕೆ, ವಾಣಿಜ್ಯ, ಬ್ಯಾಂಕಿಂಗ್ ಅಥವಾ ಇತರ ಯಾವುದೇ ವೃತ್ತಿಯನ್ನು ಪ್ರತಿನಿಧಿಸುವವರು), ಸಂತೆ ಬಸ್ತವಾಡದ ಭರಮಪ್ಪ ಗುಡಮಕೇರಿ (ಅನುಸೂಚಿತ ಜಾತಿ/ ಪಂಗಡ), ಧಾರವಾಡದ ರವಿ ಸವದತ್ತಿ (ಹಿಂದುಳಿದ ವರ್ಗ), ಬೆಂಗಳೂರಿನ ಎನ್.ಆರ್. ಪುರದ ವಿನುತಾ ಶ್ರೀನಿವಾಸ್ (ಮಹಿಳೆ), ಅಥಣಿಯ ಲೆನಿನ್ ಡಿ. ಹಳಿಂಗಳಿ (ಧಾರ್ಮಿಕ ಅಲ್ಪಸಂಖ್ಯಾತ), ಹುಬ್ಬಳ್ಳಿ ವಿದ್ಯಾನಗರ ಬಡಾವಣೆಯ ಡಾ.ಪ್ರಭುಗೌಡ ಪಾಟೀಲ (ಸಾಮಾನ್ಯ), ಹುಬ್ಬಳ್ಳಿಯ ಪಂಚಾಕ್ಷರಿ ನಗರದ ಪ್ರವೀಣ ಬಿರಾದರ ಗೌಡರ (ಸಾಮಾನ್ಯ) ನಾಮನಿರ್ದೇಶನಗೊಂಡವರು.

ಮೂರು ವರ್ಷಗಳನ್ನು ಮೀರದ ಅವಧಿಗಾಗಿ ಅಥವಾ ಮುಂದಿನ ಆದೇಶದವರೆಗೆ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು–2) ಅಧೀನ ಕಾರ್ಯದರ್ಶಿ ಮಹೇಶ್ ಅರ್. ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT