ಶುಕ್ರವಾರ, ಮಾರ್ಚ್ 5, 2021
30 °C

ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕಾಗವಾಡದಲ್ಲಿ ಜ. 30 ಹಾಗೂ 31ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ  ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಅಧಿಕೃತವಾಗಿ ಆಹ್ವಾನ ನೀಡಿ ಸನ್ಮಾನಿಸಲಾಯಿತು.

ನಗರದ ಅವರ ನಿವಾಸದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಕಾಗವಾಡ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸಿದ್ದನಗೌಡ ಕಾಗೆ ಹಾಗೂ ಸದಸ್ಯರು ಕೋರೆ ಅವರಿಗೆ ಕನ್ನಡ ರುಮಾಲು ಕಟ್ಟಿ ಸನ್ಮಾನಿಸಿ ಆಹ್ವಾನ ನೀಡಿದರು. ಇದೇ ವೇಳೆ ಅವರ ಪತ್ನಿ ಆಶಾ ಕೋರೆ ಅವರನ್ನೂ ಸತ್ಕರಿಸಿದರು.

ಈ ವೇಳೆ ಮಾತನಾಡಿದ ಕೋರೆ, ‘ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳಿಗೆ, ಕವಿಗಳಿಗೆ ಮೀಸಲಾಗಿದೆ. ನಾನು ಸಾಹಿತಿ ಅಲ್ಲದಿದ್ದರೂ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿದ್ದು ಸಂತಸವಾಗಿದೆ. ಗಡಿ ಭಾಗದ ಕಾಗವಾಡದಲ್ಲಿ ನಡೆಯುವ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸಿ, ಕನ್ನಡ ಸಾಹಿತ್ಯಕ್ಕೆ ಮೆರಗು ತರೋಣ’ ಎಂದು ನುಡಿದರು.

ಸಾಹಿತಿ ಡಾ.ಬಸವರಾಜ ಜಗಜಂಪಿ, ‘ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕು. ಸಮಯಕ್ಕೆ ಸರಿಯಾಗಿ ಗೋಷ್ಠಿಗಳನ್ನು ನಡೆಸಬೇಕು. ಕೋರೆ ಅವರು ಸರ್ವಾಧ್ಯಕ್ಷರಾಗಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದದರು.

ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ, ಡಾ.ಹೇಮಾವತಿ ಸೊನೊಳ್ಳಿ, ಪ್ರಕಾಶ ದೇಶಪಾಂಡೆ, ಯ.ರು. ಪಾಟೀಲ, ಶ್ರೀಪಾದ ಕುಂಬಾರ, ಡಾ.ಸೋಮಶೇಖರ ಹಲಸಗಿ, ಬಾಬು ನಾಯಕ, ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಪಾರ್ವತಿ ಪಾಟೀಲ, ನೀಲಗಂಗಾ ಚರಂತಿಮಠ, ಶಶಿಕಲಾ ಯಲಿಗಾರ, ಭುವನೇಶ್ವರಿ ಪೂಜೇರಿ, ಅಕ್ಕಮಹಾದೇವಿ ತೆಗ್ಗಿ, ಇಂದಿರಾ ಮೊಟೆಬೆನ್ನೂರ, ಸುನಂದಾ ಎಮ್ಮಿ, ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ, ಅನಿತಾ ಮೂಗತ್ತಿ, ಜಯಶ್ರೀ ನಿರಾಕಾರಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು