ಸೋಮವಾರ, ಜುಲೈ 26, 2021
26 °C

ಚಿಣ್ಣರಿಗೆ ಕಥೆ ಹೇಳುವ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹಮಾರಾ ದೇಶ ಸಂಘಟನೆಯು ‘ಗುರು ಪೂರ್ಣಿಮೆ’ ನಿಮಿತ್ತ ಚಿಣ್ಣರಿಗಾಗಿ ಸಣ್ಣ ಕಥೆ ಹೇಳುವ ಸ್ಪರ್ಧೆಯನ್ನು ಆನ್‌ಲೈನ್‌ನಲ್ಲಿ ಆಯೋಜಿಸಿದೆ.

ಭಾರತೀಯ ಪರಂಪರೆಯಲ್ಲಿ ಬರುವ ಪ್ರಮುಖ ಗುರು-ಶಿಷ್ಯರ ಮಹತ್ವದ ಕುರಿತು ಒಂದು ಸಣ್ಣ ಕಥೆ ಮಾಡಿ ಅವರ ವ್ಯಕ್ತಿತ್ವವನ್ನು ವಿಡಿಯೊ ಮಾಡಿ ತಿಳಿಸಬೇಕು. 1ರಿಂದ 5ನೇ ತರಗತಿಯ ಮಕ್ಕಳು ಪಾಲ್ಗೊಳ್ಳಬಹುದು. 3ರಿಂದ 4 ನಿಮಿಷಗಳ ವಿಡಿಯೊ ಮಾಡಬೇಕು. ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಯಾವುದಾದರೊಂದು ಭಾಷೆಯಲ್ಲಿ ಮಾತನಾಡಿ ಜುಲೈ 23ರ ಒಳಗೆ 9008014707 ಅಥವಾ 9886648401 ಮೊಬೈಲ್‌ ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡಬಹುದು.

ಪ್ರಥಮ ಬಹುಮಾನವಾಗಿ ₹ 500, ದ್ವಿತೀಯ– ₹ 300 ಹಾಗೂ ತೃತೀಯ– ₹ 200 ಕೊಡಲಾಗುವುದು. ಪ್ರವೇಶ ಶುಲ್ಕ ಇರುವುದಿಲ್ಲ. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.