ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿಯಲ್ಲಿ ಪ್ಯಾಲಿಸ್ಟೀನ್‌ ಧ್ವಜದ ಮಾದರಿಯ ಶಾಮಿಯಾನ

Published : 21 ಸೆಪ್ಟೆಂಬರ್ 2024, 9:38 IST
Last Updated : 21 ಸೆಪ್ಟೆಂಬರ್ 2024, 9:38 IST
ಫಾಲೋ ಮಾಡಿ
Comments

ಬೆಳಗಾವಿ: ನಗರದಲ್ಲಿ ಭಾನುವಾರ (ಸೆ.22) ನಡೆಯಲಿರುವ ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆಯಲ್ಲಿ, ಇಲ್ಲಿನ ದರ್ಬಾರ್‌ ಗಲ್ಲಿಯ ಬೀದಿಯೊಂದರಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹೋಲುವ ದೊಡ್ಡ ಶಾಮಿಯಾನ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.

ಬೆಳಿಗ್ಗೆ ವೀರಭದ್ರ ನಗರದಲ್ಲಿ ಬೀದಿಯೊಂದರಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹೋಲುವ ಬೀದಿ ಶಾಮಿಯಾನ ಹಾಕಲಾಗಿತ್ತು. ಮುಂದೆ ಎರಡು ಖಡ್ಗ ನೇತುಹಾಕಿ ಅವುಗಳಿಗೂ ಪ್ಯಾಲಿಸ್ಟೀನ್‌ ಧ್ವಜದ ಬಣ್ಣವನ್ನೇ ಬಳಿಯಲಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು.

ದರ್ಬಾರ್‌ ಗಲ್ಲಿಯಲ್ಲೂ ಅರ್ಧ ಕಿಲೋಮೀಟರ್‌ವರೆಗೆ ಶಾಮಿಯಾನ ಹಾಕಲಾಗಿದ್ದು, ಪ್ಯಾಲಿಸ್ಟೀನ್‌ ಧ್ವಜದ ಬಣ್ಣ ಹಾಗೂ ಮಾದರಿ ಬಳಸಲಾಗಿದೆ. ಮಧ್ಯಾಹ್ನ 3ರವರೆಗೂ ಈ ಶಾಮಿಯಾನ ಹಾಗೇ ಇತ್ತು.

ಇದರ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ; ಶಾಮಿಯಾನದ ಕೆಂಪು ಭಾಗವನ್ನು ಮಾತ್ರ ಮಡಚಿ ಅಲ್ಲಿಯೇ ತೂಗು ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT