ಹುಕ್ಕೇರಿ: ಮಹಾರಾಷ್ಟ್ರದ ಪಂಢರಪುರಕ್ಕೆ ಆರಂಭವಾಗಿರುವ ಬೆಳಗಾವಿ– ಪಂಢರಪುರ ಬಸ್ ಇಲ್ಲಿನ ನಿಲ್ದಾಣಕ್ಕೆ ಬಂದಾಗ, ಪ್ರಯಾಣಿಕರು ಹಾಗೂ ಸಾರ್ವಜನಿಕರು ಬಸ್ಗೆ ಪೂಜೆ ಸಲ್ಲಿಸಿದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ಪಂಢರಪುರಕ್ಕೆ ಹೋಗಲು ಇದರಿಂದ ಅನುಕೂಲವಾಗಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಮುಖಂಡ ಗುರುರಾಜ ಕುಲಕರ್ಣಿ ಮಾತನಾಡಿ, ಕಳೆದ ಹಲವಾರು ವರ್ಷದಿಂದ ಪಂಢರಪುರಕ್ಕೆ ನೇರ ಬಸ್ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಚಿಕ್ಕೋಡಿ, ಮೀರಜ ಸಾಂಗಲಿಗೆ ಹೋಗಿ ಅಲ್ಲಿಂದ ಬೇರೆ ಬಸ್ ಹಿಡಿದು ಹೋಗಬೇಕಾಗಿತ್ತು. ಇದರಿಂದ ವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಈಗ ನೇರ ಬಸ್ ಸಂಪರ್ಕ ಕಲ್ಪಿಸಿದ್ದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಮಾರ್ಗ: ಬೆಳಗಾವಿ ಮಧ್ಯಾಹ್ನ 12ಕ್ಕೆ ಬಿಟ್ಟು, 1 ಗಂಟೆಗೆ ಹುಕ್ಕೇರಿಗೆ, 2 ಗಂಟೆಗೆ ಚಿಕ್ಕೋಡಿ, 3.30ಕ್ಕೆ ಮೀರಜ, ಸಂಜೆ 6.45ಕ್ಕೆ ಪಂಢರಪುರ ತಲುಪಿ ವಾಸ್ತವ್ಯ ಮಾಡುವುದು. ಮತ್ತೆ ಪಂಢರಪುರದಿಂದ ಬೆಳಿಗ್ಗೆ 6.45ಕ್ಕೆ ಹೊರಟು 10.15ಕ್ಕೆ ಮೀರಜ ತಲುಪುವುದು. ಅಲ್ಲಿಂದ ಹೊರಟು 11.40ಕ್ಕೆ ಚಿಕ್ಕೋಡಿ, 12.30ಕ್ಕೆ ಹುಕ್ಕೇರಿ ಮಾರ್ಗವಾಗಿ 1.30ಕ್ಕೆ ಬೆಳಗಾವಿ ತಲುಪುವುದು ಎಂದು ಸುನೀಲ ಬೊಂಗಾಳೆ ತಿಳಿಸಿದರು. ಸಾರ್ವಜನಿಕರು ಬಸ್ಸಿನ ಸೌಲಭ್ಯ ಪಡೆಯುವಂತೆ ಇದೆ ಸಂದರ್ಭದಲ್ಲಿ ವಿನಂತಿಸಿದರು.

ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಸಾರ್ವಜನಿಕರು ಇದೆ ಸಂದರ್ಭದಲ್ಲಿ ಸತ್ಕರಿಸಿದರು.

ಡಿಪೊ ಸಂಚಾರಿ ನಿಯಂತ್ರಕ ಸುನೀಲ್ ಬೊಂಗಾಳೆ, ಸತ್ಯಪ್ಪ ಕೆಳಗಡೆ, ಮಾರುತಿ ಹಟ್ಟಿ, ಸತಗೌಡ ಮುದಿಗೌಡರ, ರಾಜು ಮರಿನೈಕ, ಮುಖಂಡರಾದ ಸುಶಾಂತ ಬೊಂಗಾಳೆ, ನಾಮದೇವ ಬೊಂಗಾಲೆ, ನೀಲಪ್ಪ ನೂಲಿ, ರಾಜೀವ ಜಾಧವ್, ಮಾರುತಿ ಪವಾರ್, ಗಜಾನನ ಮಡಿವಾಳ, ಸುರೇಖಾ ಮುರಾರಿ ಮತ್ತು ಸ್ಥಳೀಯರು ಸಿಹಿ ಹಂಚಿ ಸಂಭ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-21-20104060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.