ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಎಚ್‌ಒಗೆ ಪಿಡಿಒ ಅವಾಚ್ಯ ಪದ ಬಳಕೆ: ಖಂಡನೆ

ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರಗೆ ಮನವಿ
Published : 2 ಸೆಪ್ಟೆಂಬರ್ 2024, 15:38 IST
Last Updated : 2 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಸವದತ್ತಿ: ಇಂಚಲ ಪಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ನಿಂದಿಸಿದ್ದನ್ನು ಖಂಡಿಸಿ ಶಿಸ್ತುಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಪ್ರತಿಭಟಿಸಿ ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು.

ಮುಖ್ಯ ವೈದ್ಯಾಧಿಕಾರಿ ಎಚ್.ಎಂ. ಮಲ್ಲನಗೌಡರ ಮಾತನಾಡಿ, ‘ಇಂಚಲ ಗ್ರಾಮದ ಪಿಎಚ್‌ಸಿಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಪರ್ಯಾಯವಾಗಿ ಚಚಡಿಯ ಪಿಎಚ್‌ಸಿಯ ಡಾ.ವಿಶಾಲು ಗದಗ ಮತ್ತು ಡಾ. ನಾಗರಾಜಗೌಡ ಮಾಳಿಪಾಟೀಲರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಇಲಾಖೆಯಿಂದ ಅಗತ್ಯ ಮತ್ತು ತ್ವರಿತ ಕ್ರಮ ಜರುಗಿಸಲಾಗಿದೆ. ಆದಾಗ್ಯೂ ಪಿಡಿಒ ಮಲ್ಲಪ್ಪ ಹಾರೋಗೊಪ್ಪ ಇವರು ಟಿಎಚ್‌ಒ ಶ್ರೀಪಾದ ಸಬನೀಸ್ ಅವರಿಗೆ ದೂರವಾಣಿ ಕರೆ ಮಾಡಿದ್ದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.

‘ತಾಲ್ಲೂಕು ಪಂಚಾಯ್ತಿ ಇಒ ಜೊತೆ ಚರ್ಚಿಸಿ ಸರಿಪಡಿಸಲಾಗುವುದೆಂದು ತಿಳಿಸಿದರೂ ನಿಂದನೆ ಮುಂದುವರಿಸಿ, ಮೇಲಾಧಿಕಾರಿಗಳಿಗೂ ತಿಳಿಸಿರಿ; ಮುಂದಿನ ಪರಿಣಾಮ ಎದುರಿಸುತ್ತೇನೆಂದು ಉದ್ಘಟತನ ತೋರಿದ್ದಾರೆ’ ಎಂದು ಹೇಳಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ತಾಲ್ಲೂಕು ಆರೋಗ್ಯ ಅಧಿಕಾರಿಯೊಂದಿಗೆ ಏಕವಚನದ ಅವಾಚ್ಯ ಪದ ಬಳಕೆ ಖಂಡನೀಯ. ಇದು ವೈಯಕ್ತಿಕ ಹಾಗೂ ಇಲಾಖೆಯ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೂಡಲೇ ಪಿಡಿಒ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಘಟನೆ ಕುರಿತು ಇಲಾಖೆ ಸಿಬ್ಬಂದಿ ಒಂದು ದಿನದ ಮಟ್ಟಿಗೆ ಎಲ್ಲ ಪಿಎಚ್‌ಸಿಗಳ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಪಾದಯಾತ್ರೆ ಮೂಲಕ ತಾಲ್ಲೂಕು ಆಡಳಿತ ಸೌಧದವರೆಗೆ ರ‍್ಯಾಲಿ ನಡೆಸಿದರು.

ವ್ಶೆದ್ಯರಾದ ವಿ.ಎಂ. ನರಗುಂದ, ಕವಿತಾ ಎಚ್.ವಿ, ಸಿದ್ದಪ್ಪ ಕೋರಿಶೆಟ್ಟರ, ರಿಜವಾನ ದೇಸಾಯಿ, ಕೆ.ಬಿ. ಹನಸಿ, ಶಾರದಾ ದೊಡಮನಿ, ವೀಣಾ ಇಟ್ನಾಳಮಠ, ಪ್ರಮೋದ ಸಿಂದಗಿ, ಅಶೋಕ ಮುರಗೋಡ, ಕಾರ್ತಿಕ ವಾಲಿ, ಆರ್.ಆರ್. ಹಿರೇಕುಂಬಿ, ಜ್ಯೋತಿ ಬಸರಿ, ಎಸ್.ಎಸ್. ಹಿರೇಮಠ, ಅಬ್ದುಲ್ ಬಿಸ್ತಿ, ಬಿ.ಎಸ್. ಬಳ್ಳೂರ, ಆನಂದ ಮೂಗಬಸವ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT