ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ದಾಖಲಾದರೆ ಸೌಲಭ್ಯ ಕಟ್!: ಪಿಡಿಒ ಬೀರಪ್ಪ ಕಡಗಂಚಿ ಎಚ್ಚರಿಕೆ

Last Updated 24 ಏಪ್ರಿಲ್ 2021, 11:10 IST
ಅಕ್ಷರ ಗಾತ್ರ

ತೆಲಸಂಗ: ‘ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಾದಲ್ಲಿ ಸರ್ಕಾರಿ ಸವಲತ್ತನ್ನು ನಿಲ್ಲಿಸಲಾಗುವುದು’ ಎಂದು ಪಿಡಿಒ ಬೀರಪ್ಪ ಕಡಗಂಚಿ ಎಚ್ಚರಿಕೆ ನೀಡಿದರು.

ಗ್ರಾಮದ ಮುಖ್ಯ ಬಜಾರ್‌ನಲ್ಲಿ ಶನಿವಾರ ನಡೆದ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್ ವಿರುದ್ಧದ ಹೋರಾಟಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ, ಪಂಚಾಯ್ತಿಯಿಂದ ಬರುವ ಸರ್ಕಾರಿ ಸೌಲಭ್ಯಗಳನ್ನು ಬಂದ್ ಮಾಡಲಾಗುವುದು. ಸರ್ಕಾರಿ ನೌಕರರಿಗೆ ಮಾತ್ರ ಜನರ ಜೀವದ ಬಗ್ಗೆ ಕಾಳಜಿ ಇದ್ದಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಇದು ಸಲ್ಲದು. ಜನದಟ್ಟಣೆ ತಪ್ಪಿಸಲು ಮಂಗಳವಾರ ಸಂತೆಯನ್ನು ಎರಡು ಕಡೆ ನಡೆಸಲಾಗುವುದು. ಕಿರಾಣಾ ಬಜಾರಲ್ಲಿ ಕಿರಾಣಿ ಮತ್ತು ಬಿವಿವಿ ಸಂಘದ ಹೈಸ್ಕೂಲ್ ಮೈದಾನದಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶವಿದೆ. ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಪಿಕೆಪಿಎಸ್ ಉಪಾಧ್ಯಕ್ಷ ಪರಸು ಥೈಕಾರ, ಗ್ರಾ.ಪಂ. ಸದಸ್ಯ ಶ್ರೀಶೈಲ ಇಂಚಗೇರಿ, ಶಂಕರ ಸಕ್ರಿ, ಚನ್ನಪ್ಪ ದಸಮಾ, ಬಸವರಾಜ ಖ್ಯಾಡಿ, ರವಿ ರೋಡಗಿ, ಸಿದ್ದು ಸಕ್ರಿ, ಮೃತ್ಯುಂಜಯ ಮಠದ, ಕಾಂತು ಕುಂಬಾರ, ಗುರುರಾಜ ಖ್ಯಾಡಿ, ಮಹಾಂತೇಶ ಅವಟಿ, ಸಿಬ್ಬಂದಿಗಳಾದ ಸಂಗಮೇಶ ಕುಮಠಳ್ಳಿ, ಶಿವಾನಂದ ಬನಗೊಂಡ, ರಾಜು ಕುಮಠಳ್ಳಿ, ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT