ಶೋಭಾಯಾತ್ರೆ; ಪೇಜಾವರ ಶ್ರೀ ಮೆರವಣಿಗೆ

ಶನಿವಾರ, ಏಪ್ರಿಲ್ 20, 2019
31 °C
ಹರಿದಾಸ ಹಬ್ಬ ಇಂದಿನಿಂದ

ಶೋಭಾಯಾತ್ರೆ; ಪೇಜಾವರ ಶ್ರೀ ಮೆರವಣಿಗೆ

Published:
Updated:
Prajavani

ಬೆಳಗಾವಿ: ಇಲ್ಲಿನ ಹರಿದಾಸ ಸೇವಾ ಸಮಿತಿಯವರು ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಏ. 12ರಿಂದ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ಹರಿದಾಸ ಹಬ್ಬ’ದ ಪೂರ್ವಭಾವಿಯಾಗಿ ಗುರುವಾರ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು.

ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಬೆಳ್ಳಿರಥದ ಮೆರವಣಿಗೆಯಲ್ಲಿ ಕರೆತರಲಾಯಿತು. ಟಿಳಕ ವೃತ್ತದಿಂದ ಆರಂಭವಾದ ಯಾತ್ರೆ ರಾಮಲಿಂಗಖಿಂಡ್ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ ಮಾರ್ಗವಾಗಿ ಮಾರುತಿಗಲ್ಲಿ ಮಾರುತಿ ದೇವಸ್ಥಾನದವರೆಗೆ ಸಾಗಿತು. ವಿವಿಧ ಭಜನಾ ಮಂಡಳಗಳ ಮಹಿಳೆಯರು ಹರಿದಾಸರ ಪದಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ, ಕೋಲಾಟ ಆಡುತ್ತಾ ಸಂಭ್ರಮದಿಂದ ಪಾಲ್ಗೊಂಡಿದ್ದರು. ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದರು.

ಬಳಿಕ ಮಾರುತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಸ್ವಾಮೀಜಿ, ‘ದಾಸರಲ್ಲಿ ಮೊದಲ ದಾಸರೆಂದರೆ ಹನುಮಂತ ದೇವರು. ಲಂಕೆಗ ಹೋದಾಗ ತಾನು ತನ್ನ ಕುರಿತು ಏನನ್ನೂ ಹೇಳಿಕೊಳ್ಳದೇ ರಾಮನ ದಾಸನೆಂದು ಪರಿಚಯ ಮಾಡಿಕೊಂಡ’ ಎಂದರು.

‘ರಾಮನವಮಿ ಸಂದರ್ಭದಲ್ಲಿ ನಡೆಯುತ್ತಿರುವ ಹರಿದಾಸ ಹಬ್ಬ ಅಪರೂಪದ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು.

ಗಾಯಕ ರಾಯಚೂರು ಶೇಷಗಿರಿದಾಸ, ಮುಖಂಡರಾದ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯಿ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ, ಪ್ರೊ.ಜಿ.ಕೆ. ಕುಲಕರ್ಣಿ, ವ್ಯಾಸಾಚಾರ್ಯ ಅಂಬೇಕರ, ಗುರುರಾಜ ಪರ್ವತಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !