ಹುಕ್ಕೇರಿ: ಪಟ್ಟಣದಲ್ಲಿ ಬುಧವಾರ ಬೆಳಗಿನ ಜಾವ ವಿವಿಧೆಡೆ ಕಾಮಣ್ಣನನ್ನು ದಹನ ಮಾಡಲಾಯಿತು.

ಜನರು ಹೋಳಿಗೆ ಮಾಡಿ ಕಾಮಣ್ಣನಿಗೆ ನೈವೇದ್ಯ ಅರ್ಪಿಸಿದರು. ಬೇವಿನ ಗಿಡದ ಟೊಂಗೆಯನ್ನು ನೆಟ್ಟು ಅದರ ಸುತ್ತ ಸಗಣಿ ಕುರಳು, ಕಟ್ಟಿಗೆಗಳಿಂದ ಗೂಡು ರಚಿಸಿ, ಪೂಜೆ ಸಲ್ಲಿಸಿ ಬೆಳಗಿನ ಜಾವ ಅಗ್ನಿ ಸ್ಪರ್ಶ ಮಾಡಲಾಯಿತು. ನೆರೆದವರೆಲ್ಲ ಬೊಬ್ಬೆ ಹೊಡೆದು ಜತೆಗೆ ತಂದ ಕಡಲೆ ಬೀಜಗಳನ್ನು ಕಾಮಣ್ಣನ ಬೆಂಕಿಯಲ್ಲಿ ಸುಟ್ಟುಕೊಂಡರು.

ನಂತರ ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣಗಳನ್ನು ಮುಖಕ್ಕೆ ಹಾಗೂ ಮೈಮೇಲೆ ಎರಚಿ ರಂಗ ಪಂಚಮಿ ಆಚರಿಸಿದರು. ಬಣ್ಣದಿಂದ ಮಿಂದೆದ್ದ ಯುವಕರು ದ್ವಿಚಕ್ರ ವಾಹನಗಳ ಮೇಲೆ ಕುಳಿತು ಪಟ್ಟಣವೆಲ್ಲ ಸುತ್ತಾಡಿದರು. ಕೇಕೆ ಹಾಕಿ ಸಂಭ್ರಮಿಸಿದರು. ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಮಹಿಳೆಯರು ಗುಂಪಾಗಿ ಬಣ್ಣ ಹಚ್ಚಿಕೊಂಡು, ಒಬ್ಬರಿಗೊಬ್ಬರು ಎರಚಿ ಸಂಭ್ರಮಿಸಿದರು.

ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.