ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಎನ್‌ಸಿಸಿಯಲ್ಲಿ ಪುನಶ್ಚೇತನ ಕಾರ್ಯಕ್ರಮ

Last Updated 8 ಏಪ್ರಿಲ್ 2021, 12:36 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ‘ಎನ್‌ಸಿಸಿ 25 ಕರ್ನಾಟಕ ಬೆಟಾಲಿಯನ್’ ವತಿಯಿಂದ ಎನ್‍ಸಿಸಿ ಸಮೂಹ ಕೇಂದ್ರ ಸ್ಥಾನದ ಸಹಯೋಗದಲ್ಲಿ ಏ. 16ರವರೆಗೆ ಹಮ್ಮಿಕೊಂಡಿರುವ ಪಿಐಒಸಿ (ಪರ್ಮನೆಂಟ್ ಇನ್‍ಸ್ಟ್ರಕ್ಟರ್ ಓರಿಯಂಟೇಶನ್ ಕೋರ್ಸ್) ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಲಾಯಿತು.

ಎನ್‍ಸಿಸಿಯ ಸಮೂಹ ಕಮಾಂಡರ್ ಕರ್ನಲ್ ಕೆ. ಶ್ರೀನಿವಾಸ ಉದ್ಘಾಟಿಸಿ ಮಾತನಾಡಿ, ‘ಸಮರ್ಪಕವಾಗಿ ತರಬೇತಿ ನೀಡಬೇಕು. ಕೆಡೆಟ್‍ಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಬೇಕು’ ಎಂದು ನಿರ್ದೇಶನ ನೀಡಿದರು.

ಕರ್ನಾಟಕ ಹಾಗೂ ಗೋವಾ ಆರ್ಮಿ, ನೆವಿ ಹಾಗೂ ಏರ್ಫೋರ್ಸ್‌್ ನಿರ್ದೇಶನಾಲಯದ ಆಶ್ರಯದಲ್ಲಿ ಈ ಕೋರ್ಸ್ ಸಂಘಟಿಸಲಾಗಿದೆ. ಎನ್‍ಸಿಸಿ ಕೆಡೆಟ್‍ಗಳನ್ನು ನಿರ್ವಹಣೆ ಮಾಡುವುದು, ಅವರಲ್ಲಿ ಕಲಿಕಾ ಕೌಶಲ ಬೆಳೆಸುವುದು ಮತ್ತು ಗುಣಮಟ್ಟ ಹೆಚ್ಚಿಸುವ ಉದ್ದೇಶ ಇದರದ್ದಾಗಿದೆ. ಗಣರಾಜ್ಯೋತ್ಸವ ದಿನದ ಕ್ಯಾಂಪ್‌ಗೆ, ಬಿ ಹಾಗೂ ಸಿ ಪ್ರಮಾಣಪತ್ರ ಪಡೆಯಲು ಸಿದ್ಧತೆಯನ್ನು ಕೆಡೆಟ್‌ಗಳು ನಡೆಸುವರು. ಮ್ಯಾಪ್ ರೀಡಿಂಗ್, ಡ್ರಿಲ್ ಸೇರಿ ಹೊರಾಂಗಣದಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ತರಬೇತಿ ನೀಡಲಾಗುವುದು. ಶಸ್ತ್ರಸಜ್ಜಿತ ಸೇನೆಯ ಬಗ್ಗೆ ತಿಳಿವಳಿಕೆ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT