ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ: ಹಂಚಾಟೆ ಸಂಜೀವಕುಮಾರ್

ಗುರುವಾರ , ಏಪ್ರಿಲ್ 25, 2019
31 °C

ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ: ಹಂಚಾಟೆ ಸಂಜೀವಕುಮಾರ್

Published:
Updated:

ಬೆಳಗಾವಿ: ‘ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಾಗುವ ವಿವಾದ ಬಗೆಹರಿಸುವ ಸಲುವಾಗಿ ಕಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ಜನರು ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವಕುಮಾರ್ ತಿಳಿಸಿದ್ದಾರೆ.

‘ಪ್ರಯಾಣ, ಸರಕು ಸಾಗಣೆ ಸೇವೆ, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ಆಸ್ಪತ್ರೆ ಅಥವಾ ವಿತರಣೆ ಸೇವೆಗಳು, ವಿಮೆ, ಬ್ಯಾಂಕಿಂಗ್–ಹಣಕಾಸು ಸಂಸ್ಥೆಗಳು, ಶಿಕ್ಷಣ, ವಸತಿ ಹಾಗೂ ರಿಯಲ್‌ಎಸ್ಟೇಟ್ ಸೇವೆಗಳ ಸಂಬಂಧ ವಿವಾದಗಳನ್ನು ಮಾತ್ರ ಕಾಯಂ ಜನತಾ ನ್ಯಾಯಾಲಯದಲ್ಲಿ ಬಗೆಹರಿಸಲಾಗುವುದು. ವ್ಯಾಜ್ಯಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಇಲ್ಲಿ ಆದ ತೀರ್ಪಿಗೆ ಸಂಬಂಧಿಸಿ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಬೆಳಗಾವಿಯಲ್ಲಿ ಈ ನ್ಯಾಯಾಲಯವಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರ ಮಟ್ಟದ ನ್ಯಾಯಾಧೀಶ ಹಾಗೂ ಇಬ್ಬರು ಸದಸ್ಯರಿದ್ದಾರೆ. ಗ್ರಾಹಕರ ನ್ಯಾಯಾಲಯದ ಮಾದರಿಯಲ್ಲೇ ಅತಿ ಸರಳವಾಗಿ ದೂರುಗಳ ವಿಚಾರಣೆ ನಡೆಯಲಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !