ಗುರುವಾರ , ಆಗಸ್ಟ್ 22, 2019
26 °C

ಬೊಲೆರೊ ಜೊತೆ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

Published:
Updated:

ಬೆಳಗಾವಿ: ತಾಲ್ಲೂಕಿನ ವಿಟಿಯು ಸಮೀಪದ ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಮಂಗಳವಾರ ಸಂಜೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತ ದೇಹ ಶನಿವಾರ ಪತ್ತೆಯಾಗಿದೆ.

ಮೃತರನ್ನು ಪ್ರಸ್ತುತ ಗೋವಾದಲ್ಲಿದ್ದ ವಿಜಯವಾಡದ ರೈಲ್ವೆ ಗುತ್ತಿಗೆದಾರ ಜಯಚಂದ್ರ (37) ಎಂದು ಗುರುತಿಸಲಾಗಿದೆ.

‘ಅವರು ಬೊಲೆರೊ ವಾಹನದಲ್ಲಿ ಹೋಗುವಾಗ ಜೋರು ಮಳೆ ಬರುತ್ತಿತ್ತು. ಆದರೂ ರಸ್ತೆ ದಾಟಲು ಯತ್ನಿಸಿದ್ದರು. ಆಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು. ಶನಿವಾರ ವಿಟಿಯು ಹಿಂದಿನ ಹಳ್ಳದಲ್ಲಿ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಾಹನವನ್ನು ಜೆಬಿಸಿ ಬಳಸಿ ಮೇಲೆತ್ತಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು’ ಎಂದು ತಿಳಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)