ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಅಭಿವೃದ್ಧಿಗೆ ‘ಶಾಲೆಗಾಗಿ ನಾನು‌’

Last Updated 16 ಏಪ್ರಿಲ್ 2019, 10:33 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ದಕ್ಷಿಣ ಮತಕ್ಷೇತ್ರದ ಶಾಸಕ, ಬಿಜೆಪಿಯ ಅಭಯ ಪಾಟೀಲ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ‘ಶಾಲೆಗಾಗಿ ನಾನು’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಹಳೆಯ ವಿದ್ಯಾರ್ಥಿಗಳ ಸಹಕಾರ ಮತ್ತು ಸಹಯೋಗದಲ್ಲಿ ಕ್ಷೇತ್ರದಲ್ಲಿರುವ ಕನ್ನಡ ಮತ್ತು ಮರಾಠಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಲಾಗುವುದು. ಬೆಂಚ್‌ಗಳ ಸರಬರಾಜು, ಕಾಂಪೌಂಡ್‌ ಹಾಗೂ ಶೌಚಾಲಯಗಳ ನಿರ್ಮಾಣ, ಗ್ರೀನ್ ಬೋರ್ಡ್‌, ಸ್ಮಾರ್ಟ್‌ ಬೋರ್ಡ್‌ಗಳ ಅಳವಡಿಕೆ, ಶಾಲೆಗಳ ಮೈದಾನಗಳ ಅಭಿವೃದ್ಧಿ, ಕಂಪ್ಯೂಟರ್‌ಗಳನ್ನು ಒದಗಿಸುವುದು, ಗ್ರಂಥಾಲಯ, ಪ್ರಯೋಗಾಲಯ, ವಿಜ್ಞಾನ ಉಪಕರಣಗಳ ಸೌಲಭ್ಯ ಕಲ್ಪಿಸುವುದು, ದುರಸ್ತಿ, ಬಣ್ಣ ಹಚ್ಚುವುದು, ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು.

‘1960ರಿಂದ ಇಲ್ಲಿವರೆಗೆ 45ಸಾವಿರ ವಿದ್ಯಾರ್ಥಿಗಳು ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಲಿತಿದ್ದಾರೆ. ಅದರಲ್ಲಿ 34ಸಾವಿರ ವಿದ್ಯಾರ್ಥಿಗಳು ನಗರದಲ್ಲಿಯೇ ವಾಸವಾಗಿದ್ದಾರೆ. ಮೊದಲ ಹಂತದಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಾರ್ಯ ಆರಂಭಿಸಲಾಗಿದೆ. ಅವರನ್ನು ಶಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಲು ಕೋರಲಾಗುವುದು’ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.

‘ಮೊದಲನೇ ಹಂತದಲ್ಲಿ ಆಯಾ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯಾ ವಿದ್ಯಾರ್ಥಿಗಳಿಂದಲೇ ಆಯಾ ಶಾಲೆಗಳಿಗೆ ಸುಣ್ಣ– ಬಣ್ಣ ಹಚ್ಚಿಸಲಾಗುವುದು. ಏ. 26ರಿಂದ ಪ್ರಾರಂಭಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT