ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ ರೈತರಿಗೂ ಅಲ್ಲ, ಯೋಧರಿಗೂ ಅಲ್ಲ: ಮೋದಿ 

ಚಿಕ್ಕೋಡಿಯಲ್ಲಿ ಪ್ರಧಾನಿ
Last Updated 30 ಏಪ್ರಿಲ್ 2019, 14:23 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸುರೇಶ ಅಂಗಡಿ ಪರ ಪ್ರಚಾರದಲ್ಲಿಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಬಾಗಲಕೋಟೆಯಲ್ಲಿ ವಿಜಯ ಸಂಕಲ್ಪ ರ್‍ಯಾಲಿ ಬಳಿಕಪ್ರಧಾನಿ, ಇಲ್ಲಿನಬಿ.ಕೆ. ಕಾಲೇಜು ಎದುರಿನಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.

ಬಸವಣ್ಣನವರ ಚಿತ್ರ ನೀಡಿ ಮೋದಿ ಅವರನ್ನು ಗೌರವಿಸಲಾಯಿತು.ನಟಿ ತಾರಾ ಅನುರಾಧಾ ಗಣೇಶ ವಿಗ್ರಹ ನೀಡಿ ಮೋದಿ ಅವರಿಗೆ ವಂದಿಸಿದರು.

ಬಿರುಬಿಸಿಲಲ್ಲೂ ಭಾಗವಹಿಸಿರುವ ಜನರು
ಬಿರುಬಿಸಿಲಲ್ಲೂ ಭಾಗವಹಿಸಿರುವ ಜನರು

‘ಜಗಜ್ಯೋತಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಸೇರಿದಂತೆ ಮುಂತಾದ ವೀರರಿಗೆ ನನ್ನ ನಮನಗಳು..’ ಎನ್ನುವ ಮೂಲಕ ಭಾಷಣ ಪ್ರಾರಂಭಿಸಿದರು.

ಇಲ್ಲಿನ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ, ‘ನಮ್ಮ ಮಾತು ಅಫೀನಿ ರೀತಿಯದು..’ ಇದೆಂಥ ಮಾತು ಎಂದು ಹರಿಹಾಯ್ದರು. ಅವರಿಗೆ ಬೆಳಿಗ್ಗಿನಿಂದ ರಾತ್ರಿವರೆಗೂ ಒಂದೇ ಕೆಲಸ, ಮೋದಿ ಅವರನ್ನು ನಿಂದಿಸು, ನಿಂದಿಸು,..ನಿಂದಿಸು.

ಕಾಂಗ್ರೆಸ್‌–ಜೆಡಿಎಸ್‌ಗೆ ವೋಟ್‌ ಬ್ಯಾಂಕ್‌ ಅಷ್ಟೇ ಮುಖ್ಯ. ಇಲ್ಲಿನ ಮುಖ್ಯಮಂತ್ರಿ ಆಡಿದ ಮಾತುಗಳನ್ನು ಸಹಿಸಲು ಸಾಧ್ಯವೇ?

ದೇಶ ಸೇವೆಯಲ್ಲಿರುವವರ ಬಗ್ಗೆ ಮಾತನಾಡುತ್ತಾರೆ, ‘ದೇಶ ಭಕ್ತಿಯ ಭಾವನೆಯನ್ನು ‍‍ಪ್ರಶ್ನಿಸಿದ್ದಾರೆ. ಸೇನೆಗೆ ಹೋಗುವವರು ಹೊಟ್ಟೆ ಪಾಡಿಗಾಗಿಅಷ್ಟೇ ಎಂದಿದ್ದರು. ಇದು ಸೇನೆಗೆ ಅಪಮಾನ ಅಲ್ಲವೇ? ದೇಶದ ಅಪಮಾನ ಅಲ್ಲವೇ? ಎಂದರು.

ಮಹಾಮೈತ್ರಿಯ ಸರ್ಕಾರ ರೈತರಿಗೂ ಅಲ್ಲ, ಯೋಧರಿಗೂಅಲ್ಲ. ರೈತರನ್ನು ಗುಂಡಾ ಎಂದು ಕರೆಯುತ್ತಾರೆ. ರೈತರಿಗೆ ಕೇಂದ್ರದ ಯೋಜನೆಗಳನ್ನು ತಲುಪದಂತೆ ತಡೆಯುತ್ತಿದ್ದಾರೆ. ಕಿಸಾನ್‌ ಸಮ್ಮಾನ್‌ ಯೋಜನೆ ಪ್ರತಿ ರೈತರನ್ನು ತಲುಪುವಂತೆ ನಾವು ಮಾಡುತ್ತೇವೆ.

ಜಲಶಕ್ತಿ ಸಚಿವಾಲಯ ರೂಪಿಸಲಾಗುತ್ತದೆ. ಈ ಮೂಲಕ ನೀರಿನ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸೇನೆಯ ಪರಾಕ್ರಮದ ಮೇಲೆ ಭರವಸೆ ಇದೆಯೇ? ಆದರೆ, ಕಾಂಗ್ರೆಸ್‌ಗೆ ನಮ್ಮ ಸೇನೆಯ ಮೇಲೆ ಭರವಸೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT