ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯುಸಿರೆಳೆದ ಪೊಲೀಸ್‌ ಶ್ವಾನ ‘ನೈನಾ’

ಸ್ಫೋಟಕ ವಸ್ತುಗಳ ಪತ್ತೆ ಹಚ್ಚುವಲ್ಲಿ ನಿಪುಣ;
Last Updated 24 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪೊಲೀಸ್‌ ಶ್ವಾನ ದಳದಲ್ಲಿ ಎಂಟು ವರ್ಷ ಕಾರ್ಯನಿರ್ವಹಿಸಿ, ನಿವೃತ್ತಿಯಾಗಿದ್ದ ‘ನೈನಾ’ ಶನಿವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆಯಿತು.

ಲ್ಯಾಬ್ರಡರ್‌ ರಿಟ್ರಿವರ್‌ ತಳಿಗೆ ಸೇರಿದ ಈ ಶ್ವಾನವು 2009ರ ಅಕ್ಟೋಬರ್‌ 21ರಂದು ಜನನವಾಗಿತ್ತು. ಬೆಂಗಳೂರಿನ ಅಡುಗೊಡಿಯಲ್ಲಿರುವ ಶ್ವಾನದಳ ತರಬೇತಿ ಶಾಲೆಯಲ್ಲಿ 2010– 2011ರ ಅವಧಿಯಲ್ಲಿ ತರಬೇತಿ ಪಡೆದಿತ್ತು. ಮುಖ್ಯವಾಗಿ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡುವ ಕಾರ್ಯ ನಿರ್ವಹಿಸುತ್ತಿತ್ತು. ಸುಮಾರು 9 ವರ್ಷ 10 ತಿಂಗಳ ನಂತರ ನಿವೃತ್ತಿಗೊಳಿಸಲಾಗಿತ್ತು.

ಆರಂಭದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಕಾರ್ಯನಿರ್ವಹಿಸಿತ್ತು. 20014ರಲ್ಲಿ ಬೆಳಗಾವಿ ನಗರ ಪೊಲೀಸ್‌ ಕಮಿಷನರೇಟ್‌ ಘಟಕ ರಚನೆಯಾದ ನಂತರ ಇಲ್ಲಿಗೆ ವರ್ಗಾವಣೆಗೊಂಡು ಬಂದಿತು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಮಂದಿರಗಳು, ಮಸೀದಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಲು ಇದನ್ನು ಬಳಸಿಕೊಳ್ಳಲಾಗಿತ್ತು.

2018ರ ಮಾರ್ಚ್‌ 1ರಂದು ನಿವೃತ್ತಿಯಾದ ನಂತರ ಇದನ್ನು ಅಂದಿನ ಪೊಲೀಸ್‌ ಆಯುಕ್ತರಾಗಿದ್ದ ಡಿ.ಸಿ. ರಾಜಪ್ಪ ತಮ್ಮ ಗೃಹ ಕಚೇರಿಯಲ್ಲಿ ಸಾಕಿಕೊಂಡಿದ್ದರು. ಅವರ ವರ್ಗಾವಣೆ ನಂತರ ಬಂದ ಬಿ.ಎಸ್‌. ಲೋಕೇಶಕುಮಾರ್‌ ಅವರು ನೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT