ಅವ್ಯವಹಾರ ಮಾಡಿದರೆ ಡಿಕೆಶಿಗೆ ಜೈಲೇ ಗತಿ, ಮಾಜಿ ಸಿಎಂ ಕೂಡ ಹೋಗಿದ್ದರು: ಯತ್ನಾಳ್

ಬೆಳಗಾವಿ: ‘ಸಿಬಿಐ, ಇಡಿಯಂಥ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತವೆ. ನಮ್ಮಲ್ಲಿ ಮಾಜಿ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳಿಸಿದ್ದರು. ಡಿ.ಕೆ.ಶಿವಕುಮಾರ್ ಯಾವ ಲೆಕ್ಕ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಡಿ.ಕೆ.ಶಿವಕುಮಾರ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಕುರಿತು ನಗರದಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಡಿಕೆಶಿ ಒಬ್ಬರ ಮೇಲೆಯೇ ಉದ್ದೇಶಿತ ದಾಳಿ ಮಾಡುತ್ತಿಲ್ಲ. ಬಿಜೆಪಿಯ ಸಂಸದರ ಮನೆಗಳ ಮೇಲೂ ದಾಳಿ ಮಾಡಿದ್ದಾರೆ. ಸಂಶಯ ಬಂದರೆ ಅವರು ದಾಳಿ ಮಾಡಿಯೇ ಮಾಡುತ್ತಾರೆ. ಅವ್ಯವಹಾರ ಮಾಡಿದವರು ಜೈಲಿಗೆ ಹೋಗಿಯೇ ಹೋಗುತ್ತಾರೆ’ ಎಂದರು.
ಜನರಿಗೆ ಬೇಕಿರುವುದು ನೆಮ್ಮದಿ, ವಿವಾದವಲ್ಲ: ‘ಬೆಳಗಾವಿಯಲ್ಲಿ ಮರಾಠಿ ಜನರೇ ಎಂಇಎಸ್ ಸಂಘಟನೆಯನ್ನು ತಿರಸ್ಕರಿಸಿದ್ದಾರೆ. 1994ರಲ್ಲಿ ನಾನು ಶಾಸಕನಾದಾಗ ಎಂಇಎಸ್ ಬೆಂಬಲಿತ ಏಳು ಶಾಸಕರು ಇದ್ದರು. ಈಗ ಒಬ್ಬರೂ ಇಲ್ಲ. ಮಹಾನಗರ ಪಾಲಿಕೆಯಲ್ಲೂ ಬೆರಳೆಣಿಕೆಯಷ್ಟು ಸದಸ್ಯರು ಇದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗಡಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ರಾಜಕೀಯ ಲಾಲಸೆಗಾಗಿ ಎಂಇಎಸ್, ಶಿವಸೇನೆ, ಮಹಾರಾಷ್ಟ್ರದ ಬಿಜೆಪಿಯವರು ಈ ತಂಟೆ ತೆಗೆಯುತ್ತಿದ್ದಾರೆ. ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಕರಣವಿದೆ. ಅದು ತೀರ್ಪು ನೀಡುವವರೆಗೆ ಸುಮ್ಮನಿರಬೇಕು’ ಎಂದರು.
ಇವನ್ನೂ ಓದಿ...
* ಡಿಕೆಶಿ ಮನೆಯಲ್ಲೇ ಸಿಬಿಐ ಕಚೇರಿ ತೆರೆಯಿರಿ ಸ್ವಾಮಿ: ರಣದೀಪ್ ಸಿಂಗ್ ಸುರ್ಜೇವಾಲಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.