ಸೋಮವಾರ, ಜನವರಿ 18, 2021
19 °C

ಸ್ಮಾರ್ಡ್‌ ಕಾರ್ಡ್ ರವಾನೆಗೆ ಸಂಚೆ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಚಾಲನಾ ಪರವಾನಗಿ ಮೊದಲಾದ ಸ್ಮಾರ್ಟ್ ಕಾರ್ಡ್‌ಗಳನ್ನು ಅರ್ಜಿದಾರರ ಮನೆಗಳಿಗೆ ತಲುಪಿಸುವ ಕಾರ್ಯಕ್ಕೆ ನೆರವಾಗುವ ಉದ್ದೇಶದಿಂದ ಆರ್‌ಟಿಒ ಆವರಣದಲ್ಲಿ ಶ್ವಾಶತ ಅಂಚೆ ಕಚೇರಿ ಪ್ರಾರಂಭಿಸಲಾಗಿದೆ’ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಂಚೆ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರ ವಿಶ್ವಾಸ ಗಳಿಸಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆಯು, ಆರ್‌ಟಿಒ ದಾಖಲಾತಿಗಳನ್ನು ಮನೆಗೆ ತಲುಪಿಸಲು ಸಜ್ಜಾಗಿರುವುದು ಒಳ್ಳೆಯ ಬೆಳವಣಿಗೆ. ಯಮನಾಪೂರ ಮತ್ತು ಕಣಬರ್ಗಿಯಲ್ಲಿ ಪ್ರಾದೇಶಿಕ ಆರ್‌ಟಿಒ ಕಚೇರಿ ನಿರ್ಮಾಣಕ್ಕೆ 8 ಎಕರೆ ಜಾಗ ಮಂಜೂರಾಗಿದೆ. ಹೊಸ ಕಚೇರಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದರು.

ಸಹಾಯಕ ಅಂಚೆ ಅಧಿಕಾರಿ ಎಂ.ಕೆ. ಕೊತ್ತಲ್, ‘ಸಾರ್ವಜನಿಕರ ಹಿತದೃಷ್ಟಿಯಿಂದ ತ್ವರಿತವಾಗಿ ದಾಖಲಾತಿ, ಆರ್‌ಟಿಒ ಸ್ಮಾರ್ಟ್‌ ಕಾರ್ಡ್‌ಗಳನ್ನು ಮನೆಗಳಿಗೆ ತಲುಪಿಸಲು ಈ ಕಚೇರಿ ಅನುಕೂಲವಾಗಿದೆ’ ಎಂದು ತಿಳಿಸಿದರು.

ಆರ್‌ಟಿಒ ಶಿವಾನಂದ ಮಗದುಮ್, ‘ವಾಹನ ಮಾಲೀಕರ ಅಲೆದಾಟ ತಪ್ಪಿಸಲು ಒಂದೇ ಸೂರಿನಲ್ಲಿ ವಾಹನಗಳ ಸಮಸ್ಯೆ ಇತ್ಯರ್ಥಗೊಳಿಸುವ ಉದ್ದೇಶದಿಂದ ಯಮನಾಪೂರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕಣಬರ್ಗಿಯಲ್ಲಿ ವಾಹನ ಚಾಲನಾ ಪರವಾನಗಿ ಕೊಡುವುದಕ್ಕಾಗಿ ಪರೀಕ್ಷೆ ನಡೆಸಲು ಸುಸಜ್ಜಿತವಾದ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ₹ 8.23 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ 8 ಎಕರೆ ಜಾಗ ಮೀಸಲಿಡಲಾಗಿದೆ. ₹ 16 ಕೋಟಿ ವೆಚ್ಚದ ಯೋಜನೆ ಇದಾಗಿದೆ’ ಎಂದರು.

ಸಹಾಯಕ ಅಂಚೆ ಅಧಿಕಾರಿ ಆರ್.ಕೆ. ಉಮರಾಣಿ ಮತ್ತು ಎಸ್.ಕೆ. ಹುಗ್ಗಿ ಸ್ವಾಗತಿಸಿದರು. ಸುಜಯ ಕುಲಕರ್ಣಿ ನಿರೂಪಿಸಿದರು. ಶೀತಲ ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು