ಪೋಸ್ಟ್‌ಮ್ಯಾನ್ ಪ್ರತಿಮೆ ಅನಾವರಣ 13ರಂದು

7

ಪೋಸ್ಟ್‌ಮ್ಯಾನ್ ಪ್ರತಿಮೆ ಅನಾವರಣ 13ರಂದು

Published:
Updated:

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ಕೇಂದ್ರ ಅಂಚೆ ಕಚೇರಿಯ ಬಳಿ ಪ್ರತಿಷ್ಠಾಪಿಸಿರುವ ಪೋಸ್ಟ್‌ಮ್ಯಾನ್‌ ಕಂಚಿನ ಪ್ರತಿಮೆ ಅನಾವರಣ, ವೃತ್ತಕ್ಕೆ ಪೋಸ್ಟ್‌ಮ್ಯಾನ್‌ ಹೆಸರು ನಾಮಕರಣ (ಪ್ರಸ್ತುತ ಟೆಲಿಗ್ರಾಫ್‌ ರಸ್ತೆ ಎಂದಿದೆ) ಹಾಗೂ ಕೇಂದ್ರ ಅಂಚೆ ಕಚೇರಿ ರಸ್ತೆ ಎಂದು ಮರುನಾಮಕರಣ ಮಾಡುವ ಕಾರ್ಯಕ್ರಮವನ್ನು ಜ. 13ರಂದು ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ.

ಸಂಸದ ಸುರೇಶ ಅಂಗಡಿ ಉದ್ಘಾಟಿಸುವರು. ಅರಣ್ಯ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ, ಅಂಚೆ ಇಲಾಖೆ ಉತ್ತರ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕ ಸಣ್ಣ ನಾಯ್ಕ, ದಂಡು ಮಂಡಳಿ ಸಿಇಒ ದಿವ್ಯಾ ಎಸ್. ಹೊಸೂರ, ಹೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಗಿರಿಧರ ಕುಲಕರ್ಣಿ ಭಾಗವಹಿಸುವರು.

350 ಕೆ.ಜಿ. ತೂಕದ ಹಾಗೂ 8 ಅಡಿ ಎತ್ತರದ ಪೋಸ್ಟ್‌ಮ್ಯಾನ್ ಪ್ರತಿಮೆ ಸ್ಥಾಪನೆಗೆ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಹಣ ನೀಡಿದ್ದಾರೆ. ವೃತ್ತ ನಿರ್ಮಾಣಕ್ಕೆ ಸಂಸದ ಸುರೇಶ ಅಂಗಡಿ ₹ 5 ಲಕ್ಷ ನೀಡಿದ್ದರು. ದಂಡು ಮಂಡಳಿ ಹಾಗೂ ಹೆಸ್ಕಾಂ ವತಿಯಿಂದ ವೃತ್ತವನ್ನು ಅಂದಗೊಳಿಸುವ ಕಾರ್ಯ ಮಾಡಲಾಗಿದೆ. ವೃತ್ತದ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ನಡೆದಿರುವುದು ವಿಶೇಷ. ಪೋಸ್ಟ್‌ಮ್ಯಾನ್‌ಗಳ ಸೇವೆ ಸ್ಮರಿಸುವುದಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಪ್ರತಿಮೆ ಸ್ಥಾಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !