ಬರಿಗಣ್ಣಿನಿಂದ ಸೂರ್ಯನ ನೋಡಿ ವಿಶ್ವದಾಖಲೆ!

7
ಬೆಳಗಾವಿಯ ಪ್ರದೀಪ ಸಾಸನೆಗೆ ಪ್ರಮಾಣಪತ್ರ

ಬರಿಗಣ್ಣಿನಿಂದ ಸೂರ್ಯನ ನೋಡಿ ವಿಶ್ವದಾಖಲೆ!

Published:
Updated:
Prajavani

ಬೆಳಗಾವಿ: ಇಲ್ಲಿನ ಭಾಗ್ಯನಗರ ನಿವಾಸಿ, ತೆರಿಗೆ ಸಲಹೆಗಾರ ಪ್ರದೀಪ್‌ ಸಾಸನೆ ಅವರು ಭಾನುವಾರ ಲೇಲೆ ಮೈದಾನದಲ್ಲಿ ಬರಿಗಣ್ಣಿನಿಂದ ಸೂರ್ಯನನ್ನು ಸತತ 10 ನಿಮಿಷಗಳವರೆಗೆ ನೋಡಿ ವಿಶ್ವದಾಖಲೆ ಮಾಡಿದರು.

ಸುಡು ಬಿಸಿಲಿದ್ದ 11.30ರ ವೇಳೆಯಲ್ಲಿ ಈ ಸಾಹಸ ಮಾಡಿ, ಗಮನಸೆಳೆದರು. ಸೂರ್ಯನನ್ನು ಕೆಲವೇ ಸೆಕೆಂಡ್‌ಗಳಷ್ಟು ನೋಡುವುದಕ್ಕೆ ಆಗುವುದಿಲ್ಲ; ಅದರಲ್ಲೂ ಹೆಚ್ಚಿನ ಸಮಯ ಬರಿಗಣ್ಣಿನಿಂದ ನೋಡಿದರೆ ಕಣ್ಣಿಗೆ ಹಾನಿಯಾಗುತ್ತದೆ ಎನ್ನುತ್ತದೆ ವೈದ್ಯ ಲೋಕ. ಆದರೆ, ಪ್ರದೀಪ್ ಸೂರ್ಯನತ್ತ ದೃಷ್ಟಿ ನೆಟ್ಟು ಸಾಧನೆ ತೋರಿದರು.

ಅವರಿಗೆ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ನ ಅಧ್ಯಕ್ಷ ಸಂತೋಷ್ ಶುಕ್ಲಾ, ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರತಿನಿಧಿ ಭರತ್‌ ಶರ್ಮ ಮತ್ತು ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಪ್ರಮಾಣಪತ್ರ ನೀಡಿದರು.

‘ನಿಪ್ಪಾಣಿಯ ಹಾಲಸಿದ್ಧನಾಥ ದೇವಸ್ಥಾನದಲ್ಲಿ ಅನ್ನಪ್ರಸಾದ ಕೈಗೊಳ್ಳುತ್ತಿದ್ದೇನೆ. 2015ರಲ್ಲಿ ಸೂರ್ಯ ನಮಸ್ಕಾರ ಮಾಡುವ ಸಂದರ್ಭದಲ್ಲಿ ಸೂರ್ಯನನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದೆ. ಆರಂಭದಲ್ಲಿ ಮೂರ್ನಾಲ್ಕು ನಿಮಿಷ ನೋಡುತ್ತಿದ್ದೆ. ಈಗ 10 ನಿಮಿಷಕ್ಕೂ ಹೆಚ್ಚು ಕಾಲ ಬರಿಗಣ್ಣಿನಿಂದಲೇ ನೋಡುತ್ತೇನೆ. ತಜ್ಞ ವೈದ್ಯರಿಂದ ಕಣ್ಣುಗಳ ತಪಾಸಣೆ ಮಾಡಿಸಿದ್ದೇನೆ. ಏನೂ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ನನ್ನಲ್ಲಿರುವ ವಿಶೇಷ ಶಕ್ತಿ ಬಳಸಿಕೊಂಡು ವಿಶ್ವ ದಾಖಲೆ ಮಾಡಬೇಕು ಎಂದು ಮನಸ್ಸಾಯಿತು. ಸ್ನೇಹಿತರೂ ಸಲಹೆ ನೀಡಿದ್ದರು. ಮುಂದಿನ ಬಾರಿ ಅರ್ಧ ಗಂಟೆವರೆಗೂ ಸೂರ್ಯನನ್ನು ನೋಡಬೇಕು’ ಎನ್ನುವ ಗುರಿ ಇದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ನ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದೆ. ಅವರು ಬಂದು ನನ್ನ ಸಾಧನೆ ವೀಕ್ಷಿಸಿ, ಪ್ರಮಾಣಪತ್ರ ನೀಡಿರುವುದು ಖುಷಿ ತಂದಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !