ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾರ್ಥಿಯಾದರೆ ನೆಮ್ಮದಿ ಹಾಳು’

Last Updated 16 ಸೆಪ್ಟೆಂಬರ್ 2021, 8:18 IST
ಅಕ್ಷರ ಗಾತ್ರ

ತೆಲಸಂಗ: ‘ಮನುಷ್ಯನು ಸ್ವಾರ್ಥಿ ಆಗುವುದು ಜೀವನವನ್ನು ಅಧಃಪತನಕ್ಕೆ ತಳ್ಳುವುದು ಮಾತ್ರವಲ್ಲದೆ, ಸುಖ–ಶಾಂತಿ–ನೆಮ್ಮದಿಯನ್ನೂ ಹಾಳು ಮಾಡುತ್ತದೆ’ ಎಂದು ಇಂಚಗೇರಿಯ ರೇವಣಸಿದ್ದೇಶ್ವರ ಮಹಾರಾಜ ಹೇಳಿದರು.

ಸಮೀಪದ ಕೊಟ್ಟಲಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶ ಮತ್ತು ಧರ್ಮ ರಕ್ಷಣೆ ಎಲ್ಲರ ಹೊಣೆಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡುವ ಕೆಲಸವನ್ನು ಪಾಲಕರು ಮಾಡಬೇಕು’ ಎಂದು ಸಲಹೆ ನೀಡಿದರು.

‘ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಹತ್ತಿ ಮಕ್ಕಳನ್ನು ಬೆಳೆಸುತ್ತಿರುವುದರಿಂದ ಸಂಬಂಧಗಳು ಹಳಸಿ ಹೋಗಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ’ ಎಂದು ವಿಷಾದಿಸಿದರು.

ಬೀಳಗಿಯ ಶಿವಾನಂದ ಸ್ವಾಮೀಜಿ, ಮುಖಂಡರಾದ ಅಡವೆಪ್ಪ ಅಥಣಿ, ಗುರು ಸತ್ತಿ, ಗುರು ಮುಗ್ಗನವರ, ಗುರು ಈಶ್ವರಪ್ಪಗೋಳ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ, ಮಹಾದೇವ ಬಡವಗೋಳ, ವಿನೋಬಾ ದೊಡ್ಡನಿಂಗಪ್ಪಗೋಳ, ಸಿದ್ದು ಕೊಂಡಿ, ಶಿವಪ್ರಭೂ ಅಥಣಿ, ಬಾವುರಾಜ ಜಳಕಿ ಉಪಸ್ಥಿತರಿದ್ದರು.

ರಘುನಾಥ ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT