ಚಿಂಚಲಿ: ಫುಟ್ಬಾಲ್ ಟೂರ್ನಿ 7ರಿಂದ

ಹಂದಿಗುಂದ: ಚಿಂಚಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜ. 7ರಿಂದ 9ರವರೆಗೆ ಅಂತರರಾಜ್ಯ ಮಟ್ಟದ ಫುಟ್ಬಾಲ್ ಟೂರ್ನಿ ಆಯೋಜಿಲಾಗಿದೆ.
ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಸಿದ್ಧತೆಗೆ ಶುಕ್ರವಾರ ಚಾಲನೆ ನೀಡಲಾಯಿತು. ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ವೀಕ್ಷಿಸಿದರು.
‘ಈ ಭಾಗದ ಯುವಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ನೇತೃತ್ವದಲ್ಲಿ ಟೂರ್ನಿ ನಡೆಸಲಾಗುತ್ತಿದೆ. 20 ತಂಡಗಳು ಈಗಾಗಲೇ ನೋಂದಾಯಿಸಿವೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾದೇವ ಪಡೋಳಕರ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಜಾಕೀರ ತರಡೆ, ತಮ್ಮಣ್ಣ ವಡ್ಡರ, ರಾಜು ಶಿಂಧೆ, ರಾಜು ಬಣಗೆ, ವಿಶ್ವನಾಥ ಪಾಟೀಲ, ರಮೇಶ ಪಾಟೀಲ, ಅಮಿತ ಚೌಗಲಾ, ಸಜಿತ ಪೂಜೇರಿ, ಆದರ್ಶ ಪೂಜೇರಿ, ಅಕ್ಷಯ ಸೌದಲಗಿ, ಸಂಜು ಸೌದಲಗಿ ಶ್ರೀಶೈಲ ಪಾಟೀಲ, ಕುಮಾರ ಹಾರೂಗೇರಿ, ಭೀಮು ಬಣಗೆ, ಅಂತು ಬಣಗೆ, ನವೀನ ಪಟೇಕರಿ, ಅಜಿತ ದಂಡಾಪುರೆ, ಅಜಿತ ಪಾಟೀಲ, ಮಹಾವೀರ ಕೋಳಿ, ಸಂಭಾ ಶಿಂಧೆ, ವಿಶ್ವನಾಥ ಜಲಾಲಪುರೆ, ಮಹಾವೀರ ಹಾರೂಗೇರಿ, ಅಜಿತ ಘೋಗಡಿ, ದಿಗ್ವಿಜಯ ದೇಸಾಯಿ ಹಾಗೂ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.