ಬುಧವಾರ, ಮೇ 18, 2022
23 °C

ಗೋಕಾಕ: ಕೃತಿ ಪರಿಚಯ ಕಾರ್ಯಕ್ರಮ ಜ.28ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಸಿರಿಗನ್ನಡ ವೇದಿಕೆ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ವತಿಯಿಂದ ಡಾ.ಸಿ.ಕೆ. ನಾವಲಗಿ ಅವರ ‘ಅಂಬಿಗರ ಚೌಡಯ್ಯನವರ ವಚನಗಳು’ ಕೃತಿ ಪರಿಚಯ ಕಾರ್ಯಕ್ರಮವನ್ನು ಜ.28ರಂದು ಸಂಜೆ 5ಕ್ಕೆ ನಗರದ ರಜನಿ ಜೀರಗ್ಯಾಳ ಅಮ್ಮಾಜಿ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ಬಿಇಒ ಜಿ.ಬಿ. ಬಳಗಾರ ಉದ್ಘಾಟಿಸಲಿದ್ದು, ವೈದ್ಯೆ ಡಾ.ಶಶಿಕಲಾ ಕಾಮೋಜಿ ಕೃತಿ ಕುರಿತು ಮಾತನಾಡಲಿದ್ದಾರೆ. ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ರಜನಿ ಜೀರಗ್ಯಾಳ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಈಶ್ವರ ಮಮದಾಪೂರ, ತಾಲ್ಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಗೀತಾ ಬನ್ನೂರ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಜಯಾ ಚುನಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.