ಶನಿವಾರ, ಮಾರ್ಚ್ 25, 2023
22 °C
ವಾರಸುದಾರರಿಗೆ ಹಿಂತಿರುಗಿಸಿದ ಜಿಲ್ಲಾ ಪೊಲೀಸರು

ಬೆಳಗಾವಿ: ₹ 8.58 ಕೋಟಿ ಮೌಲ್ಯದ ವಸ್ತು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 206 ಪ್ರಕರಣಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ‍ಪತ್ತೆ ಹಚ್ಚಿದ್ದು, ₹ 8.58 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಕಳೆದುಕೊಂಡವರು ಅಥವಾ ವಾರಸುದಾರರಿಗೆ ಮರಳಿಸಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘2020ರಲ್ಲಿ ₹ 1.05 ಕೋಟಿ ಮೌಲ್ಯದ 2 ಕೆ.ಜಿ. 336 ಗ್ರಾಂ. ಚಿನ್ನ, ₹ 7.74 ಲಕ್ಷ ಮೌಲ್ಯದ 17 ಕೆ.ಜಿ. 881 ಗ್ರಾಂ. ಬೆಳ್ಳಿ, 2021ರಲ್ಲಿ ₹ 27.25 ಲಕ್ಷ ಮೌಲ್ಯದ 702.24 ಗ್ರಾಂ. ಚಿನ್ನಾಭರಣ ಮತ್ತು ₹ 52,900 ಮೌಲ್ಯದ 1 ಕೆ.ಜಿ. 275 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ₹ 47.35 ಲಕ್ಷ ಮೌಲ್ಯದ 168 ದ್ವಿಚಕ್ರವಾಹನಗಳು, 22 ಕಾರುಗಳು ಹಾಗೂ 32 ಮೊಬೈಲ್‌ ಫೋನ್‌ಗಳ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ತಿಳಿಸಿದರು.

‘2020ರಲ್ಲಿ ₹ 1.10 ಕೋಟಿ ಹಾಗೂ 2021ರಲ್ಲಿ ₹ 10,06,850 ಕಳವಾಗಿತ್ತು. ಅದನ್ನೂ ಕಳ್ಳರಿಂದ ಜಪ್ತಿ ಮಾಡಲಾಗಿದೆ. ಜಾನುವಾರು, ಅರಿಸಿನ, ಧಾನ್ಯ, ಟೈಯರ್‌ಗಳು ಮತ್ತಿತರ ವಸ್ತುಗಳನ್ನು ಕಳವು ಮಾಡಿರುವುದು ವರದಿಯಾಗಿದೆ. ಅವುಗಳಲ್ಲಿ ₹ 1.18 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗಿದೆ. ಸಿಬ್ಬಂದಿಯು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ’ ಎಂದು ಹೇಳಿದರು.

‘ಕಾಗವಾಡ, ಚಿಕ್ಕೋಡಿ, ಅಥಣಿ, ಗೋಕಾಕ, ಅಂಕಲಿ, ಮುರಗೋಡ, ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ‍ಪ್ರಕರಣಗಳು ಇವಾಗಿವೆ. ಸಿಇಎನ್ ಅಪರಾಧ ಠಾಣೆಯಿಂದ 2020ರಲ್ಲಿ ₹ 10.97 ಲಕ್ಷ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

ನಗರದಲ್ಲಿ ನಡೆದ ಹಾಜರಿದ್ದ ವಾರಸುರಾದರಿಗೆ ವಸ್ತುಗಳನ್ನು ಅಧಿಕಾರಿಗಳು ಹಿಂತಿರುಗಿಸಿದರು.

ಎಎಸ್ಪಿ ಅಮರನಾಥ ರೆಡ್ಡಿ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.