ಗೋಕಾಕ: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದಿರುವ ತಮಿಳು ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ನಗರದ ವಾಲ್ಮೀಕಿ ವೃತ್ತದಲ್ಲಿ ನಟ ಕಮಲ್ ಹಾಸನ್ ಚಿತ್ರವನ್ನು ಸುಟ್ಟು ಪ್ರತಿಭಟಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಖಾನಪ್ಪನವರ, ಕನ್ನಡಕ್ಕೆ ತಮಿಳು ಭಾಷೆ ಮೂಲ ಎಂದು ಹೇಳಿರುವ ನಟ ಕಮಲ್ ಹಾಸನ್ ಹೇಳಿಕೆ ತರವಲ್ಲ. ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆಯಾಗಿದ್ದು, ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ನಟ ಕಮಲ್ ಹಾಸನ್ಗೆ ರಾಜಕೀಯ ಪಕ್ಷ ಕಟ್ಟಿರುವ ಕಾರಣ ಒಂದು ರಾಜ್ಯದ ಜನರ ಒಲೈಕೆಯ ಮಾತುಗಳನ್ನು ಆಡಿರುವುದು ಖಂಡನೀಯ’ ಎಂದರು.

ಪ್ರತಿಭಟನೆಯಲ್ಲಿ ವೇದಿಕೆಯ ಕಾರ್ಯದರ್ಶಿ ಸಾದಿಕ್ ಹಲ್ಯಾಳ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಹನೀಫಸಾಬ ಸನದಿ, ನಿಜಾಮ ನದಾಫ, ಕೆಂಪಣ್ಣ ಕಡಕೋಳ, ಬಸು ಗಾಡಿವಡ್ಡರ, ಶಾಂತಿನಾಥ ಹುಳ್ಳಿ, ಮಲ್ಲು ಸಂಪಗಾರ, ಸಿದ್ದು ತಿಪ್ಪವ್ವಗೋಳ, ಕಲ್ಲೋಳೆಪ್ಪ ಗಾಡಿವಡ್ಡರ, ಅಬ್ಬು ಮುಜಾವರ, ರಮಜಾನ ಅಂಡಗಿ, ಗುರು ಮುನ್ನೋಳಿಮಠ, ಆನಂದ ಖಾನಪ್ಪನವರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.