ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಅಖಾಡದಲ್ಲಿ 85 ಸ್ಪರ್ಧಿಗಳು

ಚುನಾವಣಾ ಕಣದಿಂದ ಉಮೇದುವಾರಿಕೆ ವಾಪಸ್‌ ಪಡೆದ 30 ಅಭ್ಯರ್ಥಿಗಳು; 5 ತಿರಸ್ಕೃತ
Last Updated 28 ಏಪ್ರಿಲ್ 2018, 13:49 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 120 ಅಭ್ಯರ್ಥಿಗಳಲ್ಲಿ, 30 ಸ್ಪರ್ಧಾಳುಗಳು ಕಣದಿಂದ ಹಿಂದೆ ಸರಿದರೆ, ಐವರ ನಾಮಪತ್ರ ತಿರಸ್ಕೃತಗೊಂಡಿವೆ.

ನಾಮಪತ್ರ ಹಿಂಪಡೆಯಲು ಅವಕಾಶವಿದ್ದ ಗುರುವಾರ ಇಬ್ಬರು ಕಣದಿಂದ ಹೊರಗೆ ಬಂದರೆ, ಶುಕ್ರವಾರ ಅತಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್‌ ಪಡೆದರು. ಇದೀಗ ಜಿಲ್ಲೆಯ ಅಂತಿಮ ಚುನಾವಣಾ ಕಣದಲ್ಲಿ 85 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅಂತಿಮ ಅಖಾಡದಲ್ಲಿರುವವರು:

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಅಂತಿಮ ಅಖಾಡದಲ್ಲಿ ಎ.ಎಸ್.ಪಾಟೀಲ ನಡಹಳ್ಳಿ (ಬಿಜೆಪಿ), ನಾಡಗೌಡ ಅಪ್ಪಾಜಿ ಉರುಫ್‌ ಚೆನ್ನಬಸವರಾಜ ಶಂಕರರಾವ್ (ಕಾಂಗ್ರೆಸ್), ಮಂಗಳಾದೇವಿ ಎಸ್.ಬಿರಾದಾರ (ಜೆಡಿಎಸ್), ಅಯ್ಯಪ್ಪ ದೊರೆ (ಜನ ಸಾಮಾನ್ಯರ ಪಕ್ಷ), ಬಾಪುಗೌಡ ಪಾಟೀಲ (ಶಿವಸೇನೆ), ಬಿಬಿಹಾಜರಾ ನಿಡಗುಂದಿ (ಎಐಎಂಇಪಿ), ವಿ.ಪಿ.ರಕ್ಷಿತ (ನಮ್ಮ ಕಾಂಗ್ರೆಸ್), ಹೊನ್ನಪ್ಪಗೌಡ ಎಸ್.ರಾಮತೀರ್ಥ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ನಾಗೂರ ಮೇಟಿ ಶ್ರೀಧರ (ಪಕ್ಷೇತರ), ನಾಡಗೌಡ ಗಂಗಾಧರ ಶಂಕರರಾವ್ (ಪಕ್ಷೇತರ), ಪ್ರಭುಗೌಡ ಗೌಡರ (ಪಕ್ಷೇತರ) ಸೇರಿದಂತೆ ಒಟ್ಟು 11 ಮಂದಿಯಿದ್ದಾರೆ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಬಾಪುಗೌಡ ಪಾಟೀಲ (ಕಾಂಗ್ರೆಸ್), ಭೀಮನಗೌಡ ಪಾಟೀಲ (ಜೆಡಿಎಸ್), ಸೋಮನಗೌಡ ಬಿ.ಪಾಟೀಲ (ಬಿಜೆಪಿ), ಆಸೀಫ್ ಹೆರಕಲ್ (ಆಮ ಆದ್ಮಿ ಪಕ್ಷ), ಕಿರಣ ಸಿದ್ರಾಮಪ್ಪ ಸಾವಳಬಾವಿಮಠ (ಎಐಎಂಇಪಿ), ಅಬ್ದುಲ್‌ರಹಿಮಾನ ದುಂಡಸಿ, ಧರ್ಮಪ್ಪ ಚಂದಪ್ಪ ನಾಟೀಕಾರ, ಪುಂಡಲೀಕ ರಾಯಪ್ಪ ಹಂದಿಗನೂರ, ಭೀಮಪ್ಪ ಚಂದಪ್ಪ ಪಡೇಕನೂರ, ಶ್ರೀಕಾಂತ ರಾಠೋಡ, ಸಿದ್ರಾಮಪ್ಪ ಮಠದ (ಪಕ್ಷೇತರರು) ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಶಿವಾನಂದ ಪಾಟೀಲ (ಕಾಂಗ್ರೆಸ್), ಸೋಮನಗೌಡ ಪಾಟೀಲ (ಜೆಡಿಎಸ್), ಸಂಗರಾಜ ದೇಸಾಯಿ (ಬಿಜೆಪಿ), ನಿಂಗಣ್ಣ ಆಲೂರ (ಜನಸಾಮಾನ್ಯರ ಪಕ್ಷ), ಮಲ್ಲಿಕಾರ್ಜುನ ಕೆಂಗನಾಳ (ಸ್ವರಾಜ್‌ ಇಂಡಿಯಾ), ಭಾಗ್ಯಶ್ರೀ ಪಾಟೀಲ, ಯಲ್ಲಪ್ಪ ಗುಂಡಕರ್ಜಗಿ, ಲಕ್ಷ್ಮೀಬಾಯಿ ಗುದ್ದಿ (ಪಕ್ಷೇತರರು) ಸೇರಿದಂತೆ ಒಟ್ಟು 8 ಸ್ಪರ್ಧಾಕಾಂಕ್ಷಿಗಳು ಅಖಾಡದಲ್ಲಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ (ಕಾಂಗ್ರೆಸ್), ವಿಜಯಕುಮಾರ ಪಾಟೀಲ (ಬಿಜೆಪಿ), ಭವರಮ್ಮ ಜನವಾಡ (ಎಐಎಂಇಪಿ), ಮಂಜುಳಾ ಚವ್ಹಾಣ (ಜನಸಾಮಾನ್ಯರ ಪಕ್ಷ), ಸಂಗಯ್ಯ ಹಿರೇಮಠ (ಶಿವಸೇನಾ), ಮಹಾದೇವಿ ನಾಟೀಕಾರ, ರವಿ ಪಡಸಲಗಿ, ಲಕ್ಷ್ಮೀಬಾಯಿ ಗುಡ್ಡಿ, ಸುನೀಲ ಕಾಟಕರ, ಸಂಗಪ್ಪ ಇಂಡಿ, ಸಂಗಯ್ಯ ಮರಿಮಠ, ಸಂಭಾಜಿ ಗಾಯಕವಾಡ (ಪಕ್ಷೇತರರು) ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್‌ ಹಮೀದ್‌ ಮುಶ್ರೀಫ್ (ಕಾಂಗ್ರೆಸ್), ಪೀರಪಾಶಾ ಗಚ್ಚಿನಮಹಲ್ (ಎನ್‌ಸಿಪಿ), ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ), ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ (ಜೆಡಿಎಸ್), ಮಹೇಶ ಜಾಧವ (ಶಿವಸೇನಾ), ರಾಕೇಶ ತೇಲಿ (ಭಾರತೀಯ ಜನಶಕ್ತಿ ಕಾಂಗ್ರೆಸ್), ಈರಪ್ಪ ಕುಂಬಾರ, ಕಲ್ಲಪ್ಪ ರೇವಣಸಿದ್ದಪ್ಪ ಕಡೇಚೂರ, ದೋಂಡಿಬಾ ರಾಠೋಡ, ಸಿದ್ರಾಮಪ್ಪ ಪಂಚಪ್ಪ ಕಲ್ಬುರ್ಗಿ (ಪಕ್ಷೇತರರು) ಸೇರಿದಂತೆ ಒಟ್ಟು 10 ಸ್ಪರ್ಧಿಗಳು ಕಣದಲ್ಲಿ ಉಳಿದಿದ್ದಾರೆ.

ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲ ಗೋವಿಂದ ಕಾರಜೋಳ (ಬಿಜೆಪಿ), ದೇವಾನಂದ ಫೂಲಸಿಂಗ್ ಚವ್ಹಾಣ (ಜೆಡಿಎಸ್), ವಿಠ್ಠಲ ದೋಂಡಿಬಾ ಕಟಕದೊಂಡ (ಕಾಂಗ್ರೆಸ್), ಕಟಕದೊಂಡ ದೀಪಕ (ಹಿಂದೂಸ್ತಾನ ಜನತಾ ಪಾರ್ಟಿ), ಕವಿತಾ ಕಟಕದೊಂಡ (ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್), ಕೃಷ್ಣಾ ಚವ್ಹಾಣ (ಎಐಎಂಇಪಿ), ಭಾರತಿ ಕಾಲೇಬಾಗ (ಕೆಜೆಪಿ), ಸಾಗರ ಇರಸೂರ (ಭಾರತೀಯ ಜನಶಕ್ತಿ ಕಾಂಗ್ರೆಸ್), ಸಂಜೀವ ಮಾನೆ (ನಮ್ಮ ಕಾಂಗ್ರೆಸ್), ತುಳಸಪ್ಪ ದಾಸರ, ದಾದಾಸಾಹೇಬ ಬಾಗಾಯತ್, ರಾಹುಲ ಭಾಸ್ಕರ್ (ಪಕ್ಷೇತರರು) ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ದಯಾಸಾಗರ ಪಾಟೀಲ (ಬಿಜೆಪಿ), ಬಸವರಾಜ ಪಾಟೀಲ ಉರುಫ್‌ ಗೌಡರ (ಜೆಡಿಎಸ್), ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್), ಡಿ.ಜಿ.ಕಟಕದೊಂಡ ಉರುಫ್‌ ವೆಂಕಟೇಶ್ವರ ಮಹಾ ಸ್ವಾಮೀಜಿ (ಹಿಂದೂಸ್ತಾನ ಜನತಾ ಪಕ್ಷ), ಲಕ್ಷ್ಮೀಬಾಯಿ ತಡ್ಲಗಿ (ಎಐಎಂಇಪಿ), ಅಬುಜರ ತಾಮಟಗೇರ, ಉದುರಫಾರೂಖ್‌ ಸಹಿದಸಾಬ್‌ ಬಾಗವಾನ, ಗೊಲ್ಲಾಳಲಿಂಗನಗೌಡ ಪೀರಪ್ಪಗೌಡ ಜ್ಯೋತಿಗೊಂಡ, ಚಂದ್ರಶೇಖರ ಹೊಸಮನಿ, ಚನ್ನಪ್ಪ ಭೋಸಗಿ, ರವಿಕಾಂತ ಪಾಟೀಲ, ಸದಾಶಿವ ಗಿರಿಮಲ್ಲ ಬಿರಾದಾರ (ಪಕ್ಷೇತರರು) ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಅಂತಿಮ ಅಖಾಡದಲ್ಲಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಭೂಸನೂರ ರಮೇಶ (ಬಿಜೆಪಿ), ಮನಗೂಳಿ ಮಲ್ಲಪ್ಪ (ಜೆಡಿಎಸ್), ಶಂಶೋದ್ಧೀನ್ ಮುಲ್ಲಾ (ಎನ್‌ಸಿಪಿ), ಸಾಲಿ ಮಲ್ಲಣ್ಣ (ಕಾಂಗ್ರೆಸ್), ಗುಲಶನಬಿ ನದಾಫ್ (ಎಐಎಂಇಪಿ), ಲಿಯಾಕತ್ಲಿ ದರ್ಗಾ (ಪ್ರಜಾ ಪರಿವರ್ತನ), ಈರಣ್ಣ ವಿಶ್ವಕರ್ಮ, ನಾಗೇಶ ರಾಠೋಡ, ಮಲ್ಲು ಪೂಜಾರಿ (ಪಕ್ಷೇತರರು) ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT