ಬೆಳಗಾವಿ: ‘ಭಗವಾನ್ ಮಹಾವೀರರು ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ಸತ್ಯ, ಅಹಿಂಸೆ ಮತ್ತು ಅಪರಿಗ್ರಹ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ, ವಿಶ್ವದ ತುಂಬೆಲ್ಲ ಶಾಂತಿ ನೆಲೆಸಲಿದೆ’ ಎಂದು ಪಂಜಾಬ್ನ ರಾಜ್ಯಪಾಲ ಗುಲಾಬಚಂದ ಕಟಾರಿಯಾ ಹೇಳಿದರು.

ಇಲ್ಲಿನ ಮಹಾವೀರ ಭವನದಲ್ಲಿ ಭಗವಾನ್ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ವಿಶ್ವವಿಡೀ ಅಶಾಂತಿ ವಾತಾವರಣ ಕಂಡುಬರುತ್ತಿದೆ. ಇದಕ್ಕೆ ಪ್ರಕೃತಿಯಲ್ಲ; ಮನುಷ್ಯನ ಅತಿಯಾಸೆಯೇ ಕಾರಣ. 2,624 ವರ್ಷಗಳ ಹಿಂದೆ ಮಹಾವೀರರು ಮಾನವ ಕಲ್ಯಾಣಕ್ಕಾಗಿ ವಿಶ್ವಸಂದೇಶ ನೀಡಿದ್ದಾರೆ. ಆ ಸಂದೇಶ ಜೈನರಿಗಷ್ಟೇ ಅಲ್ಲ. ಇಡೀ ಮಾನವರಿಗೆ ನೀಡಲಾಗಿದೆ. ಯಾರು ಮಹಾವೀರರ ತತ್ವ, ಸಿದ್ಧಾಂತ ಪಾಲಿಸುತ್ತಾರೋ, ಅವರೆಲ್ಲರೂ ಜೈನರೇ ಆಗಿದ್ದಾರೆ’ ಎಂದು ತಿಳಿಸಿದರು.

‘ಅಹಂಕಾರ, ಕ್ರೋಧ, ಮೋಹದಿಂದ ನಾವು ದೂರವಿರಬೇಕು. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಆಗ ನಾವೆಲ್ಲರೂ ಸಹ ಮಹಾವೀರರಂತೆ ಆಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಇಂದು ಭಾರತವು ಇಡೀ ವಿಶ್ವಕ್ಕೆ ಮಾನವತಾವಾದಿ ದಾರಿ ತೋರಿಸುತ್ತಿದೆ. ಎಲ್ಲ ರಾಷ್ಟ್ರಗಳ ಜತೆಗೆ ಬಂಧುತ್ವದ ಭಾವನೆ ಬೆಳೆಸುತ್ತಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಲಸಿಕೆ ಕಂಡುಹಿಡಿದು, ಇಡೀ ವಿಶ್ವಕ್ಕೆ ಉಚಿತವಾಗಿ ವಿತರಿಸಿ ಜನರ ಜೀವ ರಕ್ಷಿಸಿದೆ. ಭಾರತದ ವಿಜ್ಞಾನಿಗಳು ಅನೇಕ ಸಂಶೋಧನೆ ನಡೆಸಿದ್ದಾರೆ. ಆ ಸಂಶೋಧನೆಗಳು ಮಾನವ ಕಲ್ಯಾಣಕ್ಕಾಗಿ ಮೀಸಲಾಗಿವೆ’ ಎಂದರು.

‘ಭಾರತದ ವಿದ್ಯಾರ್ಥಿಗಳಲ್ಲಿ ಕೌಶಲಗಳ ಕೊರತೆ ಇಲ್ಲ. ಆದರೆ, ಅವರಿಗೆ ಉತ್ತಮ ದಾರಿ ತೋರಬೇಕಿದೆ. ಈ ಕೆಲಸವನ್ನು ಪ್ರಭಾಕರ ಕೋರೆ ಮಾಡುತ್ತಿರುವುದು ಸಂತಸದ ಸಂಗತಿ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಮಹಾವೀರರು ತಮ್ಮ ಜೀವನವನ್ನು ಮಾನವ ಕಲ್ಯಾಣಕ್ಕಾಗಿ ಮೀಸಲಿಟ್ಟು, ವಿಶ್ವದ ಶಾಂತಿಗೆ ಶ್ರಮಿಸಿದರು. ಅಂತೆಯೇ, 12ನೇ ಶತಮಾನದಲ್ಲಿ ಬಸವೇಶ್ವರರು ಜಾತಿ, ಮತ, ಪಂಥಗಳನ್ನು ಮೀರಿ ನಡೆದುಕೊಂಡರು. ಇಂಥ ಮಹಾನ್ಪುರುಷರು ತೋರಿದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು’ ಎಂದರು.

ಶಾಸಕ ಅಭಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಕಟಾರಿಯಾ ಅತಿಥಿ ಪರಿಚಯಿಸಿದರು.

ಅನಿತಾ ಗುಲಾಬಚಂದ ಕಟಾರಿಯಾ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಕಟಾರಿಯಾ ಫೌಂಡೇಷನ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಲಲಿತ ಸಂಘವಿ ಕಟಾರಿಯಾ, ನರೇಂದ್ರ ಜೈನ, ಸಂತೋಷ ಜೈನ, ಪ್ರವೀಣ ಭಾಫನಾ, ವಿನೋದ ದೊಡ್ಡಣ್ಣವರ ಉಪಸ್ಥಿತರಿದ್ದರು. ಅಂಕಿತ ಖೋಡಾ ನಿರೂಪಿಸಿದರು. ರವಿರಾಜ ಪಾಟೀಲ ಸ್ವಾಗತಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ ವಂದಿಸಿದರು.

ಇದಕ್ಕೂ ಮುನ್ನ, ಸಿಪಿಇಡಿ ಮೈದಾನದಿಂದ ಆರಂಭಗೊಂಡ ಬೈಕ್ ರ್ಯಾಲಿ ವಿವಿಧ ಮಾರ್ಗಗಳಲ್ಲಿ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.