‘ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಬೇಕು’

7
ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣೆ

‘ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಬೇಕು’

Published:
Updated:
Deccan Herald

ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.

ಕ್ವಿಟ್‌ ಇಂಡಿಯಾ ಚಳವಳಿಯ 76ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ಸಹಸ್ರಾರು ಮಂದಿಯ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಬ್ರಿಟಿಷರನ್ನು ಭಾರತದಿಂದ ತೊಲಗುವಂತೆ ಮಾಡುವಲ್ಲಿ ಅವರೆಲ್ಲರ ಹೋರಾಟ ಯಶಸ್ವಿಯಾಯಿತು. ಇದರಿಂದಾಗಿ ನಾವು ಇಂದು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ದೇಶಕ್ಕಾಗಿ ಪ್ರಾಣ ತೆತ್ತ ಹೋರಾಟಗಾರರ ಜೀವನಚರಿತ್ರೆಯನ್ನು ಇಂದಿನ ಯುವಜನರು ತಿಳಿದುಕೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲರಾವ್ ಯಾಳಗಿ, ರಾಜೇಂದ್ರ ಕಲಘಟಗಿ, ಪರಶುರಾಮಬಾವು ನಂದಿಹಳ್ಳಿ ಹಾಗೂ ಶಿವಾಜಿರಾವ್ ಕದಂ ಅವರನ್ನು ಸತ್ಕರಿಸಲಾಯಿತು.

ನಂತರ, ಕ್ಲಬ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಉಪಾಧ್ಯಕ್ಷ ಮಲ್ಲಪ್ಪ ಮುರಗೋಡ, ಮುಖಂಡರಾದ ಸುಭಾಷ್ ಸೋನವಾಲಕರ, ಮೋಹನರೆಡ್ಡಿ, ರಾಜಾ ಸಲೀಂ ಕಾಶಿಂನವರ, ಸಂತೋಷ್ ಹಂಜಿ, ಲತಾ ಎ., ಮಲ್ಲೇಶ ಚೌಗುಲೆ, ಪ್ರಕಾಶ ದೇಶಪಾಂಡೆ, ಕಾರ್ತಿಕ್ ಪಾಟೀಲ, ಸಲೀಂ ಖತೀಬ್, ಅರವಿಂದ ದಳವಾಯಿ, ಸಿ.ಸಿ. ಪಾಟೀಲ, ರಾಜು ಶಿಂಗೆ, ನಜೀರ್‌ ಶೇಖ್, ಮೋಹನ್ ರೆಡ್ಡಿ, ಮಹಾಂತೇಶ ಮತ್ತಿಕೊಪ್ಪ, ಪರಪ್ಪ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !