ರಾಯಬಾಗ: ಜಿಲ್ಲಾ ವಿಶೇಷ ಘಟಕ ಹಾಗೂ ಗಿರಿಜನ ಅಭಿವೃದ್ಧಿ ಯೋಜನೆಯಡಿ ಬುಧವಾರ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಗಳನ್ನು ಶಾಸಕ ಡಿ.ಎಂ.ಐಹೊಳೆ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ನಾನು ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವೆ. ಈ ಯೋಜನೆಗಳ ಸದುಪಯೋಗ ಪಡೆದುಕೊಂಡರೆ ಜೀವನಮಟ್ಟದಲ್ಲಿ ಸ್ಪಷ್ಟ ಬದಲಾವಣೆ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಮೀನುಗಾರಿಕೆ ವೃತ್ತಿಯನ್ನು ಉತ್ತೇಜಿಸಲು ಇಂತಹ ಸಲಕರಣೆಗಳ ವಿತರಣೆ ಸಹಕಾರಿಯಾಗಿದ್ದು, ಫಲಾನು ಭವಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಮೀನುಗಾರಿಕಾ ಇಲಾಖೆಯ ಎಂ.ಬಿ. ಪೂಜೇರಿ, ಸಂಜಯ ಬಂಡಿ ಮುಖಂಡರಾದ ಸದಾನಂದ ಹಳಿಂಗಳಿ, ಬಸವರಾಜ ದೋಣವಾಡೆ, ಅನಿಲ ಹಂಜೆ,ಸಂಜೂ ಮೈಶಾಳೆ,ಮಹೇಶ ಕರಮಡಿ, ವಿನೋದ ಹಿರೇಮಠ, ಮಲ್ಲು ಅಸೋದೆ, ಸವಿತಾ ಅಸೋದೆ, ಕೀರ್ತಿ ಚೇತಾರ, ಸುಶೀಲಾ ಚೇತಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1755062444

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.