ರಾಮದುರ್ಗ: ಕೃಷಿ ಮತ್ತು ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಶಾಸಕ ಅಶೋಕ ಪಟ್ಟಣ ವಿರುದ್ಧ ಮೇ 25ರಂದು ಸಾಲಹಳ್ಳಿಯಲ್ಲಿ ಗುರ್ಲಾಪೂರ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ದೇವರಡ್ಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲ್ಲೂಕಿನ ಎರಡು ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಆದರೆ ಕಾಮಗಾರಿ ಗುತ್ತಿಗೆ ಪಡೆದ ಎಜೆನ್ಸಿಗಳು ಯಾವ ರೀತಿ ಕೆಲಸ ನಡೆಸಿವೆ ಎಂಬುದನ್ನು ಮರೆತಿರುವ ಶಾಸಕರನ್ನು ಎಬ್ಬಿಸಲು ಹೋರಾಟ ಎಂದರು .

ರಾಮದುರ್ಗ ತಾಲ್ಲೂಕಿನಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಭೂಸ್ವಾದೀನ ಪ್ರಕ್ರಿಯೆ ಕೇವಲ ಶೇ 5 ರಷ್ಟು ಮಾತ್ರ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿಶತ 80ರಷ್ಟು ಭೂಸ್ವಾದೀನ ಪಡೆದ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿ ಕಾರಿದರು.

ಸಾಲಾಪೂರ ಏತ ನೀರಾವರಿ ಯೋಜನೆಗೆ ಭೂಸ್ವಾಧೀನ ಮಾಡಿಕೊಂಡ ಭೂಮಿ ಮಾಲೀಕರಿಗೆ ಕವಡೆ ಕಾಸಿನ ಪರಿಹಾರ ಲಭ್ಯವಾಗಿದೆ. ಇದೆಲ್ಲವನ್ನು ಸರಿ ಮಾಡಿಕೊಡುವ ಲಿಖಿತ ಉತ್ತರ ನೀಡಿದರೆ ಮಾತ್ರ ಸೋಮವಾರದ ಹೋರಾಟವನ್ನು ಕೈ ಬಿಡಲಾಗುವುದು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ರೈತಪರ ಸಂಘಟನೆಗಳ ಪದಾಧಿಕಾರಿಗಳು ಸಾಲಹಳ್ಳಿಯಲ್ಲಿ ಸೇರಿ ಬೃಹತ್ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಸುರೇಶ ಪಾಟೀಲ, ವಿ.ಎಸ್. ಪಾಟೀಲ, ಈರನಗೌಡ ಪಾಟೀಲ, ಮಾರುತಿ ಕುಂಬಾರ, ಶಂಕರಗೌಡ ಪಾಟೀಲ, ರೈತ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-21-787950958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.