ರಾಮದುರ್ಗ: ‘ಹಿಂದೆ ಕಾರ್ಮಿಕರಿಗೆ ಸೌಲಭ್ಯ ಪಡೆಯಲು ನಿರಂತರವಾಗಿ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆದಿದ್ದು ಇತಿಹಾಸ ನಿರ್ಮಾಣವಾಗಿದೆ. ಈಗ ನಮ್ಮನ್ನು ಆಳುವ ಸರ್ಕಾರಗಳು ನಾಲ್ಕು ಹೊಸ ಸಂಹಿತೆಗಳನ್ನು ಮಾಡಿ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಕಸಿದುಕೊಳ್ಳುವಂತಹ ನೀತಿ ತಂದಿರುವುದು ವಿಪರ್ಯಾಸ’ ಎಂದು ಕಾರ್ಮಿಕ ಮುಖಂಡ ಗೈಬು ಜೈನೆಖಾನ್ ಹೇಳಿದರು.

ಇಲ್ಲಿನ ಗುರು ಭವನದಲ್ಲಿ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

‘ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನೀಡಲು ಕಳೆದ ಒಂದು ವರ್ಷದಿಂದಲೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದಿದ್ದರೂ ಈವರೆಗೆ ದುಡಿಯುವ ಜನರಿಗೆ ಕನಿಷ್ಠ ವೇತನ ನಿಗದಿಯಾಗಿಲ್ಲ. ಉಚಿತ ಗ್ಯಾರಂಟಿ ಯೋಜನೆಯ ಕುರಿತು ಮಾತನಾಡುವ ಸರ್ಕಾರ ಕಾರ್ಮಿಕರ ಕಡೆಯೂ ಗಮನಹರಿಸಬೇಕು’ ಎಂದು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ಸಂಗೊಳ್ಳಿ ಹೇಳಿದರು.

‘ಅಸಂಘಟಿತ ವಲಯದಲ್ಲಿ ದುಡಿಯುವ ಜನರ ಸ್ಥಿತಿ ದುಸ್ತರವಾಗಿದೆ. ಸರಿಯಾಗಿ ಕೆಲಸ ಇಲ್ಲ, ವೇತನವೂ ಇಲ್ಲ ಕಾರ್ಮಿಕರು ಕೊಂಡುಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರಗಳು ಕಾರ್ಮಿಕರ ಸಹಾಯಕ್ಕೆ ನಿಲ್ಲಬೇಕು’ ಎಂದು ಎಸ್.ಜಿ. ಚಿಕ್ಕನರಗುಂದ ಒತ್ತಾಯಿಸಿದರು.

‘ಬೆಳಗಾವಿ ಜಿಲ್ಲೆಯಲ್ಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿರುವ ಏಕೈಕ ಸಂಘಟನೆ ಸಿಐಟಿಯು ಮಾತ್ರವಾಗಿದೆ. ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿ ಭ್ರಷ್ಟಾಚಾರದ ವಿರುದ್ಧ ಎದ್ದು ನಿಲ್ಲಬೇಕು’ ಎಂದು ಮುಖಂಡ ಮಹ್ಮದಶಫಿ ಬೆಣ್ಣಿ, ರಾಜಶೇಖರ್ ಶೆಲವಡಿ, ವೀರಭದ್ರ ಕಂಪ್ಲಿ, ಕೃಷ್ಣ ಹೊಸೂರ್ ಹೇಳಿದರು.

ಶಿವರಾಯಪ್ಪ ಕಣಿವಿ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು .

ಕಾರ್ಮಿಕ ದಿನಾಚರಣೆಯ ಸಮಾರಂಭದದಲ್ಲಿ ತುಳಸಮ್ಮಾ ಮಾಳದಕರ, ಮಾರುತಿ ಮುದುಗುರಿ, ಸಿದ್ದಲಿಂಗಪ್ಪ ಸಿಂಗಾರಗೊಪ್ಪ, ಮಹದೇವ ಕೊಪ್ಪದ, ಮಹಾಂತೇಶ್ ಪಾಶ್ಚಾಪುರ, ನಿತಿನ್ ಕುಲಕರ್ಣಿ, ಫಾರೂಕ್ ಶೇಖ, ಸೋಹಿಲ ಬೈರಕದಾರ ಇತರರು ಇದ್ದರು.

ಮೇ ದಿನಾಚರಣೆ ಸಮಾರಂಭದಲ್ಲಿ ಪಂಚಾಯತ್ ನೌಕರರು, ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರು, ಕಟ್ಟಡ ಕಾರ್ಮಿಕರು, ಸಕ್ಕರೆ ಫ್ಯಾಕ್ಟರಿ ಕಾರ್ಮಿಕರು, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು, ಮುಂತಾದವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-21-234997093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.