ರಾಮದುರ್ಗ: ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಜನನಿಬೀಡ ಪ್ರದೇಶ, ಸಂತೆ, ಜಾತ್ರೆ ನಡೆಯುವ ವಿವಿಧ ಗ್ರಾಮಗಳಲ್ಲಿ ಜನರ ಗಮನವನ್ನು ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ 8 ಜನ ಆರೋಪಿಗಳನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆಸಿದರು. ಬಂಧಿತರಿಂದ ಒಟ್ಟು ₹4.94 ಲಕ್ಷ ಮೌಲ್ಯ ವಿವಿಧ ಕಂಪನಿಗಳ 40 ಮೊಬೈಲ್ ಫೋನ್ಗಳನ್ನು ಹಾಗೂ ₹5.40 ಲಕ್ಷ ಮೌಲ್ಯದ ಎರಡು ಕಾರುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ವಿಕಾಸ ವೆಂಕಟೇಶ ಭೋವಿ, ಕುಮಾರ ಪಾಪಣ್ಣ ಭೋವಿ, ಪ್ರವೀಣ ಮಂಜಪ್ಪ ಭೋವಿ, ಸಂತೋಷ ಗವಿಸ್ವಾಮಿ ಕುಂಡಾ, ಶಿವು ಯಲ್ಲಪ್ಪ ಭೋವಿ, ವೆಂಕಟೇಶ ಈರಪ್ಪ ಭೋವಿ, ಅಕ್ಷಯ ಗಣೇಶ ಎ.ಜಿ., ಮತ್ತು ಹುಬ್ಬಳ್ಳಿಯ ಸಚೀನ ಲಕ್ಷ್ಮಣ ಕಲ್ಲವಡ್ಡರ ಅವರನ್ನು ಬಂಧಿಸಿದ್ದಾರೆ.

ಡಿಎಸ್ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಕಟಕೋಳ ಪಿಎಸ್ಐ ಬಸವರಾಜ ಕೊಣ್ಣೂರೆ, ಪ್ರೊಬೆಷನರಿ ಪಿಎಸ್ಐ ಅನ್ನಪೂರ್ಣ, ನುರಿತ ಅಪರಾಧ ವಿಭಾಗದ ಸಿಬ್ಬಂದಿ ಬಿ.ವಿ. ಹುಲಕುಂದ, ಎಸ್.ಎಸ್. ವಜ್ರಮಟ್ಟಿ, ಎಂ.ಸಿ. ಮನ್ನಿಕೇರಿ, ಎಸ್.ಎಂ. ಬಸರಿಕಟ್ಟಿ, ಆರ್.ಬಿ. ಗೋಕಾಕ. ಡಿ.ಎಚ್. ನಧಾಫ, ಬಿ.ಎಸ್. ಚುಂಚನೂರ, ಬಿ.ಎಚ್. ಪಾಟೀಲ, ಎಂ. ಎಂ.ದ್ಯಾಮನಗೌಡರ, ಎಂ.ಜಿ. ಹಿರೂರ. ಜೆ.ಆರ್. ಗಿಡ್ಡಪ್ಪನವರ ತಂಡದಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-1696858389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.