ರಾಮದುರ್ಗ: ಮೂರು ವರ್ಷಗಳಲ್ಲಿ ಕಳ್ಳರ ಕೈಚಳಕದಿಂದ ಮೊಬೈಲ್ ಕಳೆದುಕೊಂಡಿದ್ದ ತಾಲ್ಲೂಕಿನ ರಾಮ ದುರ್ಗ, ಕಟಕೋಳ ಮತ್ತು ಸುರೇಬಾನ ಪೊಲೀಸ್ ಠಾಣೆ ವ್ಯಾಪ್ತಿಯ ಮೊಬೈಲ್ ಮಾಲೀಕರಿಗೆ ಡಿಎಸ್ಪಿ ಚಿದಂಬರ ಮಡಿವಾಳರ ಭಾನುವಾರ ವಿತರಿಸಿದರು.

ರಾಮದುರ್ಗದಲ್ಲಿ 51, ಸುರೇಬಾನದಲ್ಲಿ 7 ಮತ್ತು ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ಮೊಬೈಲ್ ಸೇರಿದಂತೆ ಒಟ್ಟು 80 ಮೊಬೈಲ್ಗಳನ್ನು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪಡೆದುಕೊಂಡ ಮೊಬೈಲ್ ವಾರಸುದಾರರ ಸಂತಸದ ನಗೆ ಬೀರಿದರು.

ಡಿಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಮೊಬೈಲ್ ಕಳೆದುಕೊಂಡು ಪ್ರತಿಯೊಬ್ಬರೂ ಪೊಲೀಸ್ ಠಾಣೆಗೆ ದೂರು ನೀಡಬೇಕು. ಪೊಲೀಸರು ಅದನ್ನು ಇಲಾಖೆ ಜಾರಿ ಮಾಡಿರುವ ಸಿಇಐಆರ್ ಆ್ಯಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಪೊಲೀಸರು ಸುಮ್ಮನಿದ್ದರೂ ಸಾಫ್ಟ್ವೇರ್ ಮಾತ್ರ ನಿರಂತರ ಅನ್ವೇಷಣೆಯಲ್ಲಿ ತೊಡಗಿ ಮೊಬೈಲ್ ಇರುವಿಕೆಯನ್ನು ಪತ್ತೆ ಮಾಡುತ್ತದೆ ಎಂದು ತಿಳಿಸಿದರು.

ಇಂಥ ಮೊಬೈಲ್ ಆ್ಯಪ್ ಇಲಾಖೆ ಬಳಕೆ ಮಾಡಿಕೊಳ್ಳುತ್ತಿರುವುದು ಮಾನವೀಯ ಕೆಲಸಗಳು ಕಡಿಮೆಯಾಗುತ್ತಿವೆ. ಕಳುವಾದ ವಸ್ತುಗಳನ್ನು ಸಲೀಸಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಮೊಬೈಲ್ ಕಳೆದುಕೊಂಡವರು ನಿರ್ಲಕ್ಷ್ಯ ವಹಿಸದೇ ತಕ್ಷಣವೇ ದೂರು ನೀಡಿ ಮರಳಿ ಪಡೆಯಬೇಕು ಎಂದು ಹೇಳಿದರು.

ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ಸಿಇಐಆರ್ ಆ್ಯಪ್ ನಿರ್ವಹಣೆಯನ್ನು ರಾಮದುರ್ಗದಲ್ಲಿ ಮಹಿಳಾ ಮುಖ್ಯ ಪೇದೆ ಬಿ.ಎಚ್. ಮುನವಳ್ಳಿ ಅವರು ನೋಡಿಕೊಳ್ಳುತ್ತಿದ್ದಾರೆ. ಅವರ ನಿರಂತರ ಪ್ರಯತ್ನದ ಫಲವಾಗಿ ಫೋನ್ ಕಳೆದುಕೊಂಡವರಿಗೆ ಮರಳಿ ದೊರೆಯುತ್ತಿವೆ ಎಂದರು.

ಪಿಎಸ್ಐ ಸವಿತಾ ಮುನ್ಯಾಳ ಸ್ವಾಗತಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-21-1566288333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.