ರಾಮದುರ್ಗ: ಪಟ್ಟಣದ ತೇರು ಬಜಾರಿನಲ್ಲಿರುವ ಟೌನ್ ಪೋಸ್ಟ್ ಕಚೇರಿಯನ್ನು ಪುನಃ ಆರಂಭಿಸುವ ಭರವಸೆಯನ್ನು ಲಿಖಿತವಾಗಿ ನೀಡಿದ ನಂತರ ಎರಡು ದಿನಗಳಿಂದ ಪ್ರಧಾನ ಅಂಚೆ ಕಚೇರಿ ಮುಂಭಾಗ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ವಿಜಯ ಸೇನೆಯ ಪದಾಧಿಕಾರಿಗಳು ಮತ್ತು ಫಲಾನುಭವಿಗಳು ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಆಗಮಿಸಿದ ರಾಮದುರ್ಗ ವಿಭಾಗದ ಇನ್ಸ್ಪೆಕ್ಟರ್ ನಾಗರಾಜ್ ಮಳ್ಳಿ, ದಾವಲಸಾಬ ಅಣ್ಣಿಗೇರಿ ಟೌನ್ ಪೋಸ್ಟ್ ಅನ್ನು ಪ್ರಧಾನ ಅಂಚೆ ಕಚೇರಿಗೆ ವಿಲೀನ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ರಾಮದುರ್ಗದಲ್ಲಿ ವಿಜಯ ಸೇನಾ ಸಮಿತಿಯು ಟೌನ್ ಪೋಸ್ಟ್ ಆಫೀಸ್ ವಿಲೀನ ಮಾಡಬಾರದು ಎಂದು ಬೆಳಗಾವಿ ಸಂಸದ, ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು.

ವಿಜಯ ಸೇನಾ ಸಮಿತಿ ಸಂಸ್ಥಾಪಕ ವಿಜಯ ನಾಯ್ಕ, ತಾಲ್ಲೂಕು ಅಧ್ಯಕ್ಷ ಮಾರುತಿ ಮಾದರ, ಪ್ರಶಾಂತ ಅಂಗಡಿ, ಕರವೇ ಅಧ್ಯಕ್ಷ ವಿನಯ ಚಂದರಗಿ, ಸುಭಾಷ ಬಾರ್ಕಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-258739588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.