ರಾಮದುರ್ಗ: ಎರಡು ತಿಂಗಳಿಂದ ಶಿವಪೇಠೆ ಗ್ರಾಮಸ್ಥರಿಗೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ. ನೀರು ಬಿಡಲು ಒತ್ತಾಯಿಸಿದರೆ ವಾಟರ್ಮನ್ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಶಿವಪೇಠೆ ಗ್ರಾಮಸ್ಥರು ಶನಿವಾರ ಅವರಾದಿ ಗ್ರಾಮ ಪಂಚಾಯತಿ ಎದುರು ಖಾಲಿ ಕೊಡಗಳನ್ನು ಇಟ್ಟು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಎರಡು ತಿಂಗಳಿಂದ ಶಿವಪೇಠೆ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ನೀರು ಬಿಡುವಂತೆ ವಾಟರ್ಮನ್ ಚಂದುಸಾಬ ಮುಲ್ಲಾ ಅವರನ್ನು ವಿಚಾರಿಸಿದರೆ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಾಸಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಎ.ಡಿ ದಾಸಪ್ಪನವರ ಮತ್ತು ಅವರಾದಿ ಪಂಚಾಯಿತಿ ಪಿಡಿಒ ಬಿ.ಎಸ್. ಗುಡದನ್ನವರ ವಾಟರ್ಮನ್ ಅಮಾನತು ಮಾಡುವುದಾಗಿ ಭರವಸೆ ನೀಡಿದರು.

ಶಿವಪೇಠ ಗ್ರಾಮಕ್ಕೆ ನಿತ್ಯ ನೀರಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಈಗಿದ್ದ ವಾಟರ್ಮನ್ ಚಂದುಸಾಬ ಮುಲ್ಲಾ ಅವರನ್ನು ಶಿವಪೇಠ ಗ್ರಾಮದಿಂದ ಹೊರಹಾಕಿ ಸೌಜನ್ಯ ವರ್ತನೆಯ ಒಳ್ಳೆಯ ವ್ಯಕ್ತಿಯನ್ಜು ವಾಟರ್ಮನ್ ನೇಮಿಸುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಗಣಮುಖಿ ಮನವಿ ಮಾಡಿದರು.

ಪ್ರತಿಭಟನಾಕಾರರು ಸಂಜೆ ತನಕ ಉಪವಾಸ ಮಾಡಿದರು. ಹಸಿವು ನೀಗಿಸಿಕೊಳ್ಳಲು ಪಂಚಾಯಿತಿ ಮುಂಭಾಗದಲ್ಲಿ ಬಾಳೆ ಹಣ್ಣು, ಮಂಡಕ್ಕಿ (ಚುರಮರಿ), ಸೇವು ತಿನ್ನುವುದರ ಮೂಲಕ ಒಂದು ದಿನ ಧರಣಿ ನಡೆಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪ ಮೇಟಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಶಿವಪೇಠೆಯ ಜನರಿಗೆ ಬೆಂಬಲ ವ್ಯಕ್ತ ಪಡಿಸಿ ಸರಿಯಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಬಸನಗೌಡ ಹಳೆಮನಿ, ಪ್ರವೀಣ ಚನ್ನಪ್ಪನವರ, ಎಸ್.ಎಂ. ಇಟಗಿ, ಮಂಜುನಾಥ ಗದಗಿನ, ಬಸವರಾಜ ಬೀಳಗಿ, ರಾಮಣ್ಣ ಹುಲ್ಲಿಕೇರಿ, ನೇತ್ರಾವತಿ ಇಟಗಿ, ಅಕ್ಕಮಹಾದೇವಿ ಇಟಗಿ, ಮಾಸಾಬಿ ಓಬಳಾಪೂರ, ಹನಮವ್ವ ಗಡದೆ, ಇಮಾಮಸಾಬ ಮುಲ್ಲಾ, ಶೇಖಬಾರ, ಕುಮಾರ ಪಾಟೀಲ, ಮಾಗುಂಡಪ್ಪ ಆಲೂರ, ಮಲ್ಲಪ್ಪ ಬೇವಿನಮರದ, ವೀರೇಶ ಬೇವಿನಮರದ, ಶಿವಯೋಗಿ ಗಣಮುಖಿ, ಈರಪ್ಪ ಚನ್ನಪ್ಪನವರ, ನಾಗಪ್ಪ ಗಣಮುಖಿ, ಗಂಗಾಧರ ಆಲೂರ ಪಾಲ್ಗೊಂಡಿದ್ದರು. ಸುರೇಬಾನ ಪಿಎಸ್ಐ ಗುರುರಾಜ ಕಲಬುರ್ಗಿ ಬಂದೋಬಸ್ತ್ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-1241589486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.