ರಾಮದುರ್ಗ: ರಾತ್ರಿ ಸಮಯದಲ್ಲಿ ರೈತರ ಜಮೀನುಗಳಲ್ಲಿನ ಮೇಕೆಗಳನ್ನು ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ 6 ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ತಾಲ್ಲೂಕಿನ ಕಟಕೋಳ ಪೊಲೀಸರು ಯಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಕಿಂತ ಅಧಿಕ ನಗದು, 2 ಕಾರು ಮತ್ತು 2 ಬೈಕ್ ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಚುಂಚನೂರ (ಕೊರಕೊಪ್ಪ) ಗ್ರಾಮದ ಅಜ್ಜಪ್ಪ ನಾನಿಂಗಪ್ಪ ಗುಡೆನ್ನವರ, ಕಟಕೋಳದ ಫುರ್ಖಾನ ರಮಜಾನ ಮುಲ್ಲಾ, ಯರಗಟ್ಟಿಯ ಹಣಮಂತ ದುರ್ಗಪ್ಪ ಭಜಂತ್ರಿ, ರಘು ಜಯವಂತ ಕಾರೆಪ್ಪನವರ, ವಿಶಾಲ ಅಶೋಕ ಯಡೂರ ಮತ್ತು ಯರಗಟ್ಟಿ ತಾಲ್ಲೂಕಿನ ರೈನಾಪೂರದ ಅಲ್ತಾಪ ಮಾಬುಸಾಬ ನಧಾಪ ಎಂಬವರನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದಾರೆ.

ಕಟಕೋಳ ಪೊಲೀಸ್ ಠಾಣೆಯ 2 ಪ್ರಕರಣ, ಮುರಗೋಡ ಪೊಲೀಸ್ ಠಾಣೆಯ 2 ಪ್ರಕರಣ, ಕುಲಗೋಡ ಪೊಲೀಸ್ ಠಾಣೆಯ 2 ಪ್ರಕರಣ, ಬೈಲಹೊಂಗಲ ಪೊಲೀಸ್ ಠಾಣೆಯ 1 ಪ್ರಕರಣ, ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ 2 ಪ್ರಕರಣ ಮತ್ತು ಕೆರೂರ ಪೊಲೀಸ್ ಠಾಣೆಯ 1 ಪ್ರಕರಣ ಹೀಗೆ ಒಟ್ಟು 10 ಪ್ರಕರಣಗಳನ್ನು ಕಟಕೋಳ ಪೊಲೀಸರು ಭೇಧಿಸಿದ್ದಾರೆ.

ಕಳ್ಳತನಕ್ಕೆ ಉಪಯೋಗಿಸಿದ ₹4 ಲಕ್ಷ ₹10ಸಾವಿರ ಮೌಲ್ಯದ ಟಯೋಟಾ ಕಾರ್, ಎರಡು ಲಕ್ಷ ಮೌಲ್ಯದ ಟಾಟಾ ಜಸ್ಟ ಕಾರ್, ಮತ್ತು ಎರಡು ಬೈಕ್ ವಶ ಪಡಿಸಿಕೊಂಡಿದ್ದಾರೆ.

ಮಾರ್ಚ್ 2ರಂದು ರಾತ್ರಿ ತಾಲ್ಲೂಕಿನ ತೋರಣಗಟ್ಟಿ ಗ್ರಾಮದ ಮಂಜುಳಾ ಚಂದ್ರಪ್ಪ ಗಣೇಲ್ದ ಸಂಬಂಧಿಸಿದ ಕಟಕೋಳ-ಯರಗಟ್ಟಿ ರಸ್ತೆಯ ಬದಿಗೆ ಇರುವ ಜಮೀನದ ಶೆಡ್ದಲ್ಲಿನ 3 ಮೇಕೆಗಳನ್ನು, ಚುಂಚನೂರ ಗ್ರಾಮದ ಮಲ್ಲಿಕಾರ್ಜುನ ಮಾರುತಿ ವಡೇಕನವರ ಅವರ 1 ಮೇಕೆ, 1 ಹೋತ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ. ಆರ್. ಬಿ. ಬಸರಗಿ , ರಾಮದುರ್ಗ ಡಿ.ಎಸ್.ಪಿ. ಚಿದಂಬರ ಮಡಿವಾಳರ ಹಾಗೂ ಸಿಪಿಐ ವಿನಾಕಯ ಬಡಿಗೇರ ನೇತೃತ್ವದಲ್ಲಿ ಕಟಕೋಳ ಪಿಎಸ್ಐ ಬಸವರಾಜ ಕೊಣ್ಣೂರೆ, ಎಎಸ್ಐ ಬಿ. ವಿ. ಹುಲಕುಂದ, ಸಿಬ್ಬಂದಿ ಎಸ್. ಎಸ್. ವಜ್ರಮಟ್ಟಿ, ಎಂ. ಸಿ. ಮನ್ನಿಕೇರಿ, ಆರ್. ಬಿ. ಗೋಕಾಕ, ಡಿ. ಎಚ್. ನಧಾಫ ಮತ್ತು ಬಿ. ಎಸ್. ಚುಂಚನೂರ, ಜಿಲ್ಲಾ ತಾಂತ್ರಿಕ ವಿಭಾಗದ ವಿನೋದ ತಕ್ಕನ್ನವರ ಹಾಗೂ ಸಚೀನ ಪಾಟೀಲ ಒಳಗೊಂಡಿದ್ದ ತಂಡ ಕಳ್ಳರನ್ನು ಒಂದೇ ವಾರದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಟಕೋಳ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.