ರಾಯಬಾಗ: ‘ಸಮಾಜದಲ್ಲಿ ಘನತೆಯಿಂದ ಬದುಕಲು ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಶಾಶ್ವತ ದಾರಿದೀಪವಾಗಿವೆ’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.

ತಾಲ್ಲೂಕಿನ ಯಲ್ಪಾರಟ್ಟಿ ಬಂಗ್ಲೆಯ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಬುದ್ಧ, ಕಬೀರ್ ಹಾಗೂ ಜ್ಯೋತಿಬಾ ಫುಲೆ ಅವರನ್ನು ತಮ್ಮ ಗುರುಗಳೆಂದು ಅಂಗೀಕರಿಸಿಕೊಂಡು, ಅವರ ಚಿಂತನೆಗಳಿಂದ ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಅದೇ ವೇಳೆ ವಿದ್ಯೆ, ಸ್ವಾಭಿಮಾನ ಮತ್ತು ಶೀಲವನ್ನು ತಮ್ಮ ಜೀವನದ ಮೂಲ ಮೌಲ್ಯಗಳಾಗಿ ಸ್ವೀಕರಿಸಿ ನೈತಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮಹಾನ್ ನಾಯಕರು’ ಎಂದು ಹೇಳಿದರು.

ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತ ಗಾಣಿಗೇರ, ನಾಗೇಶ ಕಾಮಶೆಟ್ಟಿ, ತಮ್ಮಣ್ಣಾ ಗಾಣಿಗೇರ, ಮಹಾವೀರ ಹುಲ್ಲೆನ್ನವರ ಮಾತನಾಡಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾರುತಿ ಅಕ್ಕೆನ್ನವರ ಅಧ್ಯಕ್ಷೆ ವಹಿಸಿದ್ದರು.

ಹನುಮಂತ ಎಸ್. ಅಕ್ಕೆನ್ನವರ, ದುರ್ಗಪ್ಪ ತುಳಸಿಗೇರಿ, ಸುನೀಲ್ ಹುಲ್ಲೆನ್ನವರ, ಉದಯ್ ಗಾಣಿಗೇರ, ಅಲಗೊಂಡ ಹುಲ್ಲೆನ್ನವರ, ರಾಮಕೃಷ್ಣ ಹುಲ್ಲೆನ್ನವರ, ಸಂತೋಷ್ ಮೇಚನ್ನವರ, ರಾಮಾಚಾರಿ ಸಣ್ಣಕ್ಕಿನವರ, ಗೋವಿಂದ ಗುಡದಾರ, ಯಲ್ಲೂ ಗಾಣಿಗೇರ, ಭೀಮಸೇನ ತುಳಸಿಗೇರಿ, ತಮ್ಮಾಣಿ ತುಳಸಿಗೇರಿ, ಸದಾಶಿವ ಹುಲ್ಲೆನ್ನವರ, ಆಕಾಶ ಗಾಣಿಗೇರ ಇದ್ದರು.

ಯಲ್ಲಪ್ಪ ಹಿಮ್ಮಡಿ ಅವರ ‘ವಿವೇಕಾನಂದ - ಅಂಬೇಡ್ಕರ್ ಧಾರ್ಮಿಕ ವಿಚಾರಧಾರೆ’ ಕೃತಿಯ ಪ್ರತಿಗಳನ್ನು ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-1107162203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.