ರಾಯಬಾಗ: ಬಾಬಾಸಾಹೇಬರು ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವ ಮಹತ್ವದ ಗ್ರಂಥವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮೌಲ್ಯಗಳನ್ನು ಕುಗ್ಗಿಸುವ ಯತ್ನಗಳು ನಡೆಯುತ್ತಿರುವುದು ಕಳವಳಕಾರಿ. ಇದು ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಚಿಕ್ಕೋಡಿಯ ಉಪವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಸಂಜಯ ತಳವಲಕರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಅವರ ಜಯಂತಿಯಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಮಹಾದೇವ ಸನಮೂರಿ ಮಾತನಾಡಿ, ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಸ್ಥಾಪಿಸಲು ಸಂವಿಧಾನವೇ ಬಲವಾದ ಅಸ್ತ್ರವಾಗಿದ್ದು, ಅದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಸಿಪಿಐ ಎಂ.ಎಂ. ಡಫಿನ ಮಾತನಾಡಿದರು. ತಾಲ್ಲೂಕ ಮಟ್ಟದ ಅಧಿಕಾರಿಗಳಾದ ವಿಠ್ಠಲ ಚಂದರಗಿ, ಅರುಣ ಮಾಚಕನೂರ, ಎಸ್ ಎಂ ಪಾಟೀಲ, ರವೀಂದ್ರ ಪಾಟೀಲ ನೇತ್ರಾಂಜಲಿ ಭೋಸ್ಲೆ, ಕಲ್ಪನಾ ಕಾಂಬಳೆ, ವಿನೋದ ಮಾವರಕರ, ಸಂಜೀವ ಮಾಂಗ ಮುಖಂಡರಾದ ಗಣೇಶ ಕಾಂಬಳೆ, ದಿಲೀಪ ಪಾಯಣ್ಣವರ,ಕಿರಣ ಕಾಂಬಳೆ, ಮಹಾವೀರ ಸಾನೆ, ಮಹೇಶ ಕರಮಡಿ, ಸಾಗರ ಜಂಡೆನ್ನವರ, ಹಣಮಂತ ಭಿರಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-2055586509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.