ರಾಯಬಾಗ: ತಾಲ್ಲೂಕಿನ ಕಂಕಣವಾಡಿ ಬಸ್ ನಿಲ್ದಾಣದಿಂದ ಎಸ್ಸಿ ಕಾಲೊನಿ ವರೆಗೆ ₹30 ಲಕ್ಷ ಹಾಗೂ ನಿಪನಾಳ ಗ್ರಾಮದ ಎಸ್ಸಿ ಕಾಲೊನಿಯಿಂದ ನಿಪನಾಳಕರ ತೋಟದ ವರೆಗೆ ₹20 ಲಕ್ಷ ಅನುದಾನದಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಗಳು ಸುಧಾರಿಸುತ್ತಿರುವುದು ತೃಪ್ತಿ ನೀಡುತ್ತಿದೆ ಎಂದರು.

ರಸ್ತೆ ಕಾಮಗಾರಿಗಳಿಂದ ಜನರ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಗ್ರಾಮಗಳ ನಡುವೆ ಸಂಪರ್ಕವೂ ಮತ್ತಷ್ಟು ಬಲವಾಗಲಿದೆ ಎಂದು ಹೇಳಿದರು.

ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪೂರೆ, ರಾಜಶೇಖರ ಖಾನದಾಳೆ,ಅಪ್ಪಾಸಾಬ ಬ್ಯಾಕುಡೆ, ಮಹಾಲಿಂಗ ಮುದ್ದಾಪುರೆ, ವೀರೇಂದ್ರ ಬ್ಯಾಕುಡೆ, ರಮೇಶ ಪೂಜಾರಿ, ಬಸವರಾಜ ಐನಾಪೂರೆ, ಹಾಲಪ್ಪ ಪಿರಗಿ, ನಾಗಪ್ಪ ಪಡತರಿ, ನವೀನ ವಾಘ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-2091601488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.