ಆರ್‌ಸಿಯು ದಾಂದಲೆ ಪ್ರಕರಣ: ಕೊನೆಗೂ ಪ್ರಕರಣ ದಾಖಲು

7

ಆರ್‌ಸಿಯು ದಾಂದಲೆ ಪ್ರಕರಣ: ಕೊನೆಗೂ ಪ್ರಕರಣ ದಾಖಲು

Published:
Updated:

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ (ಆರ್‌ಸಿಯು) ಅ. 1ರಂದು ಆಯೋಜಿಸಿದ್ದ ರಕ್ತದಾನ ಶಿಬಿರದ ವೇಳೆ ನಡೆದಿದ್ದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಪ್ರೊ.ಎಸ್.ಬಿ. ಹೊಸಮನಿ ಹಾಗೂ ಕುಲಸಚಿವ ಸಿದ್ದು ಪಿ. ಆಲಗೂರ ಅವರು ಕಾಕತಿ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ.

ಘಟನೆ ನಡೆದು 3 ದಿನಗಳಾದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ದೂರು ನೀಡದಿರುವುದು ಹಾಗೂ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಸಂಸದ ಸುರೇಶ ಅಂಗಡಿ ಅವರು ಮುಖ್ಯಮಂತ್ರಿ ಗೃಹ ಕಚೇರಿ ಎದುರು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

‘ದೂರಿನಲ್ಲಿ ಯಾವುದೇ ವ್ಯಕ್ತಿ ವಿರುದ್ಧ ಉಲ್ಲೇಖವಿಲ್ಲ. ಅನಧಿಕೃತ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ, ಗಲಾಟೆ ನಡೆಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಕುಲಪತಿ ಹಾಗೂ ಕುಲಸಚಿವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಸ್ಪಷ್ಟಪಡಿಸಿದರು.

‘ಏಕಾಏಕಿ ನಡೆದ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೆ. ಇಂತಹ ಸಂದರ್ಭ ನನಗೆ ಹೊಸದು. ಹೀಗಾಗಿ, ದೂರು ನೀಡುವುದು ವಿಳಂಬವಾಗಿದೆ’ ಎಂದು ಕುಲಪತಿ ಪ್ರತಿಕ್ರಿಯಿಸಿದರು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !