ನಾಗರಮುನ್ನೋಳಿ: ‘ಮನುಷ್ಯ ನೆಮ್ಮದಿಯಿಂದ ಬದಕಲು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜ ಹೇಳಿದರು.

ಗ್ರಾಮದ ವಿಠ್ಠಲ ಮಂದಿರದಲ್ಲಿ ಪಾಂಡುರಂಗ ಸದ್ಭಕ್ತ ಸಪ್ತಾಹ ಸಮಾರಂಭ ಹಾಗೂ 25ನೇ ವರ್ಷದ ದಿಂಡಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಭಾರತೀಯರು ಹಬ್ಬಗಳಿಂದ ಕೂಡಿರುವ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಪಂಡರಪುಕ್ಕೆ ನಡೆದುಕೊಂಡು ಹೋಗುವ ಭಕ್ತರು ಪುಣ್ಯವಂತರು. ಅವರಿಗೆ ವಿಠ್ಠಲ- ರುಕ್ಮಣಿ ದರ್ಶನ ಜೀವನ ಪಾವನ ಮಾಡುತ್ತದೆ’ ಎಂದರು.

ಕಬ್ಬೂರಿನ ಗೌರಿ ಶಂಕರ ಮಠದ ರೇವಣ್ಣಸಿದ್ಧ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ಎಸ್ಎಸ್ ಮುಖಂಡ ವಿಠ್ಠಲ, ಡಾ.ಎಂ.ಬಿ.ಕುಂಬಾರ, ಸಿದ್ದಪ್ಪ ಮರ್ಯಾಯಿ, ಶಿವಪುತ್ರ ಮನಗೂಳಿ, ವಿ.ಬಿ.ಈಟಿ, ಡಾ.ಜ್ಞಾನೇಶ್ವರ ಕುಂಬಾರ, ಆರ್.ಕೆ.ಭಾಗಿ, ಮಹಾದೇವ ಚೌಗಲಾ, ಬಾಬು ಕಾಳನ್ನವರ, ಲಕ್ಷ್ಮೀಸಾಗರ ಈಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-21-1472346115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.