ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲಭೂತ ಕರ್ತವ್ಯ ಮರೆಯಬೇಡಿ’

Last Updated 28 ಜನವರಿ 2023, 6:25 IST
ಅಕ್ಷರ ಗಾತ್ರ

ಗೋಕಾಕ: ಸಂವಿಧಾನ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅವುಗಳನ್ನು ಸಮಾನವಾಗಿ ನಿಭಾಯಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಬಿ. ಚಂದ್ರಶೇಖರ್ ಹೇಳಿದರು.

ಕೆ.ಎಲ್.ಇ. ಸಂಸ್ಥೆಯ ಇಲ್ಲಿನ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು 74ನೇ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ‘ಜಾಗೃತ ಭಾರತ ಸೈನಿಕರಿಗೆ ಒಂದು ಸಲಾಂ’ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ‘ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ ಎಂದುಕೊಂಡು ಮೂಲಭೂತ ಕರ್ತವ್ಯಗಳನ್ನು ನಾವು ಮರೆಯುತ್ತಿದ್ದೇವೆ’ ಎಂದು ವಿಷಾಧ ವ್ಯಕ್ತಪಡಿಸಿದರು.

‌ವೃತ್ತ ಯೋಧರನ್ನು ಗೌರವಿಸಲಾಯಿತು. ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಮಹಾಂತೇಶ ಕಡಾಡಿ, ಡಾ.ರಮೇಶ ಪಟ್ಟಗುಂಡಿ, ಮಹಾಂತೇಶ ತಾವಂಶಿ, ವರ್ತಕ ಮಲ್ಲಿಕಾರ್ಜುನ ಚುನಮರಿ, ಸದಾಶಿವ ಗುದಗ್ಗಗೋಳ, ಮಾಲತಿಶ್ರೀ ಮೈಸೂರು, ರಜನಿ ಜಿರಗ್ಯಾಳ, ಸುಶ್ಮಿತಾ ಭಟ್, ಬಸವರಾಜ ಹುಳ್ಳೇರ, ರಾಮಚಂದ್ರ ಕಾಕಡೆ, ನಾರಾಯಣ ಮಠಾಧಿಕಾರಿ, ಸಮರ್ಥ ಕಾಸಮೀಸ, ಈಶ್ವರಚಂದ್ರ ಬೆಟಗೇರಿ, ಅಶೋಕ ಲಗಮಪ್ಪಗೋಳ, ಜೂನಿಯರ್ ಪುನೀತ್ ರಾಜಕುಮಾರ್, ಎಸ್.ಆರ್.ಮನ್ನಿಕೇರಿ, ಅಪ್ಪಾಸಾಬ್‌ ಗಿರೆಣ್ಣವರ, ಅರ್ಜುನ್ ಸಾಳಿ, ಭೀಮಪ್ಪ ಮಾಯನ್ನವರ, ವಿಜಯ ಜಂತಿ, ಚಿನ್ನಪ್ಪ ಹುದಲಿ, ಮಾರುತಿ ಹುಡೇದ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT